ಗೃಹಲಕ್ಷ್ಮಿ ನೋಂದಣಿಗೆ ಮುನ್ನವೇ ಸುಲಿಗೆ- ಮನೆ ಮನೆಗೆ ತೆರಳಿ 150 ರೂ. ವಸೂಲಿ

Public TV
2 Min Read
BELLARY GRUHALAKSHMI

– ಖಾಸಗಿ ಏಜೆನ್ಸಿ ವಿರುದ್ಧ ಬಳ್ಳಾರಿಯಲ್ಲಿ ಆಕ್ರೋಶ

ಬಳ್ಳಾರಿ: ಕಾಂಗ್ರೆಸ್ ಸರ್ಕಾರದ (Congress Government) ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಸರ್ಕಾರ ಅವುಗಳ ಅನುಷ್ಠಾನಕ್ಕೆ ಹರಸಾಹಸ ಪಡ್ತಾ ಇದೆ. ಈ ಮಧ್ಯೆ ಗಣಿನಾಡು ಬಳ್ಳಾರಿಯಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಹೆಸರಿಲ್ಲಿ ನೂರಾರು ಮಹಿಳೆಯರಿಗೆ ಚಾಲಾಕಿಗಳು ಪಂಗನಾಮ ಹಾಕಿದ್ದಾರೆ.

ಬಳ್ಳಾರಿಯಲ್ಲಿ ನಾಲ್ಕು ಜನರ ತಂಡ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುತ್ತೇವೆ ಅಂತಾ ಮನೆ ಮನೆಗೆ ತೆರಳಿ ಮಹಿಳೆಯರ ಬಳಿ ನಕಲಿ ಫಾರ್ಮ್ ಭರ್ತಿ ಮಾಡಿಸಿಕೊಂಡು ಒಬ್ಬೊಬ್ಬರಿಂದ 150 ರೂ. ಹಣ ಪಡೆದು ಪಂಗನಾಮ ಹಾಕಿದೆ. ಬಳ್ಳಾರಿಯ ಅಹಂಭಾವಿ, ದೇವಿನಗರ, ಬಾಪೂಜಿನಗರ ಸೇರಿದಂತೆ ವಿವಿಧೆಡೆ ಇದೇ ರೀತಿಯಾಗಿ ನೂರಾರು ಮಹಿಳೆಯರು 150 ಹಣ ಕೊಟ್ಟು ನಕಲಿ ಫಾರ್ಮ್ ಭರ್ತಿ ಮಾಡಿ ಕೊಟ್ಟಿದ್ದಾರೆ. ಸರ್ಕಾರ ಇನ್ನೂ ಯೋಜನೆಯ ಕರಡನ್ನೇ ರೆಡಿ ಮಾಡಿಲ್ಲ, ಅರ್ಜಿಯನ್ನೇ ಕರೆದಿಲ್ಲ, ಆದರೆ ಹಣ ಮಾಡುವ ಉದ್ದೇಶದಿಂದ ಮಹಿಳೆಯ ಆಸೆಯನ್ನೇ ಬಂಡವಾಳ ಮಾಡಿಕೊಂಡು ಎತ್ತುವಳಿ ಮಾಡಿದ್ದಾರೆ.

BELLARY GRUHALAKSHMI 1

ಬಳ್ಳಾರಿಯ ಹವಂಭಾವಿ ಪ್ರದೇಶದಲ್ಲಿ ಜನರು ಈ ಖದೀಮರ ಗುಂಪನ್ನು ತಡೆದು ನಿಲ್ಲಿಸಿ ಪ್ರಶ್ನೆ ಮಾಡಿದಾಗ ಇವರ ಅಸಲಿಯತ್ತು ಗೊತ್ತಾಗಿದೆ. ಕೂಡಲೇ ನೂರಾರು ಜನ ಸೇರಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಇನ್ನೂ ಈ ಬಗ್ಗೆ ವಂಚಕರನ್ನ ಕೇಳಿದ್ರೆ, ನಾವು ದಿಶಾ ಒನ್ ಎನ್ನುವ ಖಾಸಗಿ ಏಜೆನ್ಸಿಯ ಮೂಲಕ ಜನ ಸೇವೆ ಮಾಡುತ್ತಾ ಇದ್ದೇವೆ. ಈ ಬಗ್ಗೆ ಜನ ಅಪಾರ್ಥ ಮಾಡಿಕೊಂಡಿದ್ದಾರೆ ಅಂತಾ ಸಮಜಾಯಿಸಿ ಕೊಟ್ಟಿದ್ದಾರೆ.

ಒಟ್ಟಾರೆ ಗೃಹಲಕ್ಷ್ಮಿ ಯೊಜನೆ ಬಗ್ಗೆ ಮಹಿಳೆಯರಲ್ಲಿ ಸಾಕಷ್ಟು ನಿರೀಕ್ಷೆ ಇದ್ದು, ಮಹಿಳೆಯರ ಆ ಅತಿ ಆಸೆಯನ್ನೇ ಕೆಲವರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಇದು ಕೇವಲ ಬಳ್ಳಾರಿಯದಲ್ಲ ಇತರ ಜಿಲ್ಲೆಗಳಲ್ಲೂ ಹೀಗೆ ಆಗಿರಬಹುದು ಒಮ್ಮೆ ಚೆಕ್ ಮಾಡಿ. ಇದನ್ನೂ ಓದಿ: ಅನ್ನಭಾಗ್ಯದ ದುಡ್ಡಿಗಾಗಿ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article