ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಮಗಳನ್ನೂ ಎಳೆದಾಡಿದ್ರು!

Public TV
1 Min Read
dog

ಬೆಂಗಳೂರು: ಅಪರಿಚಿತರು ಬಂದಾಗ ಸಾಕು ನಾಯಿಗಳು ಬೊಗಳುವುದು ಸಾಮಾನ್ಯ. ಅಂತೆಯೇ ನಾಯಿ ಬೊಗಳಿದ್ದಕ್ಕೆ (Dog Barking) ಪಕ್ಕದ ಮನೆಯವನು ಕಿರಿಕ್ ಮಾಡಿದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಈ ಘಟನೆ ಪಟ್ಟೇಗಾರಪಾಳ್ಯದ ಮುನೇಶ್ವರ ನಗರದಲ್ಲಿ ನಡೆದಿದೆ. ಕಿರಿಕ್ ಮಾಡಿ ನಾಯಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಪುಂಡರು, ಮಾಲೀಕನ ಮಗಳನ್ನು ಕೂಡ ಎಳೆದಾಡಿದ್ದಾರೆ. ಇದನ್ನೂ ಓದಿ: ಬ್ಯಾಡಗಿಯಲ್ಲಿ ಪೊಲೀಸರನ್ನೇ ಅಟ್ಟಾಡಿಸಿದ ರೈತರು

kamakshipalya

ನಡೆದಿದ್ದೇನು..?: ದೂರುದಾರೆ ಶಾಲಿನಿಯವರ ಮನೆಯಲ್ಲಿ ನಾಯಿ ಸಾಕುತ್ತಿದ್ದಾರೆ. ಮಾರ್ಚ್ 7 ರಂದು ಪಕ್ಕದ ಮನೆಯ ಶಂಕರ್ ರಾತ್ರಿ 10-30ಕ್ಕೆ ಸ್ನೇಹಿತರ ಜೊತೆ ಬಂದಿದ್ದರು. ಅಪರಿಚಿತರು ಬಂದಿದ್ದಕ್ಕೆ ನಾಯಿ ಬೊಗಳಿದೆ. ಇಷ್ಟಕ್ಕೇ ಶಂಕರ್ ಅಂಡ್ ಗ್ಯಾಂಗ್ ನಾಯಿ ಮೇಲೆ ಅಟ್ಯಾಕ್ ಮಾಡಿದೆ. ನಾಯಿಯ ಮಾಲೀಕರು ಇದ್ಯಾಕಪ್ಪ ಅಂತಾ ಕೇಳೋಕೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಿದೆ.

ಇತ್ತ ಅಪ್ಪನ ರಕ್ಷಣೆಗೆ ಬಂದ ಕಾಲೇಜು ವಿದ್ಯಾರ್ಥಿನಿ ಶಾಲಿನಿಯನ್ನು ಕೂಡ ಗ್ಯಾಂಗ್ ಎಳೆದಾಡಿದೆ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರಿಗೆ ಯುವತಿ ಅಳುತ್ತಾ ನಡೆದ ಘಟನೆಯ ಆಡಿಯೊ ಕಳಿಸಿದ್ದಾಳೆ. ನ್ಯಾಯ ಕೊಡಿಸುವಂತೆ ಮಹಿಳಾ ಅಧ್ಯಕ್ಷರಿಗೆ ಅಳುತ್ತಾ ಆಡಿಯೊ ಮೆಸೇಜ್ ಕಳಿಸಿದ್ದಳು.

ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ರಿಂದ ಆರೋಪಿ ಕಿರಿಕ್ ಪಾರ್ಟಿ ಶಂಕರ್ ಅರೆಸ್ಟ್ ಮಾಡಲಾಗಿದೆ.

Share This Article