ಬೆಂಗಳೂರು: ಟ್ರಾವೆಲ್ ಏಜೆನ್ಸಿಯ ಕಾರು ಚಾಲಕನನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಬೇರೊಂದು ವಾಹನದಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ.
ಭಾನುವಾರ ತಡರಾತ್ರಿ ಹಾರೋಹಳ್ಳಿಯಿಂದ ಬೆಂಗಳೂರಿಗೆ ಸೌಜನ್ಯ ಟ್ರಾವೆಲ್ಸ್‍ನ ಕಾರು ಚಾಲಕ ನವೀನ್ ಬರ್ತಿದ್ರು. ಈ ವೇಳೆ ಕನಕಪುರದ ಬೋಳಾರ್ ಬಳಿ ಓವರ್ ಟೆಕ್ ಮಾಡಿಕೊಂಡು ಬಂದ ಕೆಂಪು ಬಣ್ಣದ ಕೆಎ04ಎಂಜಿ 9249 ನಂಬರಿನ ಸ್ವಿಫ್ಟ್ ಕಾರು ನವೀನ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.
ಕುಡಿದ ಮತ್ತಿನಲ್ಲಿದ್ದ ಪುಂಡರ ಗ್ಯಾಂಗ್ ಚಾಲಕ ನವೀನ್‍ಗೆ ಹಿಗ್ಗಾಮುಗ್ಗ ಥಳಿಸಿ, ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಹಣ ನೀಡಲು ನಿರಾಕರಿಸಿದ್ದಕ್ಕೆ ನವೀನ್‍ರನ್ನು ಕಿಡ್ನ್ಯಾಪ್ ಮಾಡಿ ಥಳಿಸಿ, ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ವಾಹನವೊಂದರಲ್ಲಿ ಕೂಡಿಹಾಕಿ ಕಾರ್ ಸಮೇತ ಪರಾರಿಯಾಗಿದ್ದಾರೆ.
ಸದ್ಯ ಬನಶಂಕರಿ ಪೊಲೀಸರು ನವೀನ್‍ರನ್ನು ರಕ್ಷಿಸಿ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.