ಲಕ್ನೋ: ಅನುಮತಿಯಿಲ್ಲದೇ ಮನೆಯೊಂದರಲ್ಲಿ ಸಾಮೂಹಿಕವಾಗಿ ನಮಾಜ್ ಮಾಡಿದ್ದನ್ನು ವಿರೋಧಿಸಿ ದಾಖಲಿಸಲಾಗಿದ್ದ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ರದ್ದುಗೊಳಿಸಿದ್ದಾರೆ. ತನಿಖೆ ನಡೆಸುವಂತಹ ಯಾವುದೇ ಘಟನೆ ಅಲ್ಲಿ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 24 ರಂದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ದುಲ್ಹೇಪುರ್ ಗ್ರಾಮದಲ್ಲಿ 26 ಮುಸ್ಲಿಮರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಮನೆಯೊಂದರಲ್ಲಿ ಮುಸ್ಲಿಮರ ಸಾಮೂಹಿಕ ನಮಾಜ್‌ಗೆ ನೆರೆಹೊರೆಯವರು ವಿರೋಧ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಮನೆಯಲ್ಲಿ ಸಾಮೂಹಿಕ ನಮಾಜ್ – 26 ಮಂದಿಯ ವಿರುದ್ಧ ಪ್ರಕರಣ ದಾಖಲು
Advertisement
ग्राम दूल्हेपुर में वादी चन्द्रपाल आदि ने सामूहिक नमाज पढ़ने को लेकर PS छजलैट पर मुकदमा पंजीकृत कराया था,विवेचना उपरान्त घटना का प्रमाणित होना नहीं पाया गया।अतः विवेचना को मय जुर्म खारिजा रिपोर्ट समाप्त(एक्सपंज) किया गया है। इस सम्बन्ध में #SSP @moradabadpolice की बाईट।#UPPolice pic.twitter.com/kqZKU1UEI6
— MORADABAD POLICE (@moradabadpolice) August 30, 2022
Advertisement
ಮೊರಾದಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಸೀದಿ ಇರಲಿಲ್ಲ. ಹೀಗಾಗಿ ಕೆಲವು ನಿವಾಸಿಗಳು ಸಭೆ ಹಿನ್ನೆಲೆಯಲ್ಲಿ ಒಂದೇ ಮನೆಯೊಳಗೆ ಸೇರಿದ್ದಾರೆ. ಈ ಸಂದರ್ಭದಲ್ಲಿ ನಮಾಜ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
Advertisement
ಇಂದು ಮೊರಾದಾಬಾದ್ ಪೊಲೀಸರು ಹಿಂದಿಯಲ್ಲಿ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗ್ರಾಮದಲ್ಲಿ ತನಿಖೆ ನಡೆಸಿದ ನಮ್ಮ ಪೊಲೀಸ್ ತಂಡವು ದೂರು ಆಧಾರರಹಿತ ಎಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಲವಂತವಾಗಿ ದನದ ಮಾಂಸ ತಿನ್ನಿಸಿದ ಮುಸ್ಲಿಂ ಪತ್ನಿ, ಆಕೆಯ ಸಹೋದರ- ವ್ಯಕ್ತಿ ಆತ್ಮಹತ್ಯೆ
Advertisement
ಸಾಮೂಹಿಕವಾಗಿ ನಮಾಜ್ ಮಾಡುವ ಮೂಲಕ ಜನರಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆಗಸ್ಟ್ 24 ರಂದು ಸ್ಥಳೀಯ ನಿವಾಸಿ ಚಂದ್ರ ಪಾಲ್ ಸಿಂಗ್ ದೂರು ನೀಡಿದ್ದರು. 26 ಮಂದಿಯಲ್ಲಿ 16 ಜನರ ಹೆಸರನ್ನು ಉಲ್ಲೇಖಿಸಿದ್ದರು. ಉಳಿದ 10 ಮಂದಿ ಅಪರಿಚಿತರಾಗಿದ್ದು, ಎಲ್ಲರೂ ಸ್ಥಳೀಯರೇ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.