ಚಿತ್ರದುರ್ಗ: ಜಮೀನಿನ ಬದು ಬಳಿ ಬೆಂಕಿಯಿಟ್ಟ ವಿಚಾರಕ್ಕೆ 2 ಗುಂಪಿನ ನಡುವೆ ಘರ್ಷಣೆ (Group Conflict) ನಡೆದು, ಮೂವರು ಗಾಯಗೊಂಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ಯಲ್ಲಗಟ್ಟೆ ಗ್ರಾಮದಲ್ಲಿ ನಡೆದಿದೆ.
ಚನ್ನವೀರಪ್ಪ ಎಂಬವರ ಜಮೀನಿನ ಬದು ಬಳಿ ಬೆಂಕಿಯಿಟ್ಟ ವಿಚಾರಕ್ಕೆ ಗುಂಪು ಘರ್ಷಣೆ ನಡೆದಿದೆ. ವಿರುಪಾಕ್ಷಪ್ಪ ಮತ್ತು ಗುಂಪಿನ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಚನ್ನವೀರಪ್ಪ, ನೇತ್ರಾವತಿ ಹಾಗೂ ಚಲಿಮಕ್ಕಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿಗೆ ಬೆಂಕಿ – 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ
ಕೋಲು ಹಿಡಿದು ಬಡಿದಾಟ, ತಳ್ಳಾಟದ ವಿಡಿಯೋ ಸದ್ಯ ವೈರಲ್ ಆಗಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಹಾವೇರಿ| ನಿಧಿ ಆಸೆಗಾಗಿ ಕೋಣಕಲ್ಲ ಭರಮ ದೇವರ ಕಲ್ಲು ಅಗೆದ ಕಳ್ಳರು