ವಾಷಿಂಗ್ಟನ್: ಮೆಟಾ ಮಾಲಿಕತ್ವದ ಮೆಸೇಜಿಂಗ್ ಆ್ಯಪ್ ಶೀಘ್ರವೇ ಹೊಸ ಫೀಚರ್ ತರಲಿದೆ. ಇದರ ಮೂಲಕ ವಾಟ್ಸಪ್ ಗ್ರೂಪ್‍ನ ಅಡ್ಮಿನ್ ಇತರ ಸದಸ್ಯರ ಚ್ಯಾಟ್‍ಅನ್ನು ಅಳಿಸಲು ಸಹಾಯವಾಗಲಿದೆ. ಈಗಾಗಲೇ ವಾಟ್ಸಪ್ ಈ ಫೀಚರ್‍ಅನ್ನು ಬಳಕೆದಾರರಿಗೆ ಲಭ್ಯವಾಗಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ವೈಶಿಷ್ಯ ಬಳಕೆಗೆ ಬಂದ ಬಳಿಕ ಗ್ರೂಪ್ ಅಡ್ಮಿನ್ ಇತರರು ಕಳುಹಿಸುವ ಅಶ್ಲೀಲ ಅಥವಾ ಆಕ್ಷೇಪಾರ್ಹ ಸಂದೇಶಗಳನ್ನು ಸುಲಭವಾಗಿ ಅಳಿಸಲು ಸಾಧ್ಯವಾಗಲಿದೆ. ಗ್ರೂಪ್ ನಿರ್ವಾಹಕ ಸಂದೇಶ ಅಳಿಸಿದ ಬಳಿಕ ಇತರ ಸದಸ್ಯರಿಗೆ ದಿಸ್ ವಾಸ್ ಡಿಲಿಟೆಡ್ ಬೈ ಆನ್ ಅಡ್ಮಿನ್ (ಈ ಸಂದೇಶ ನಿರ್ವಾಹಕರಿಂದ ಅಳಿಸಲಾಗಿದೆ) ಎಂದು ಗೋಚರಿಸಲಿದೆ. ಇದನ್ನೂ ಓದಿ: ಎಲಾನ್ ಮಸ್ಕ್ ಅವರ ಬಿಗ್ ಆಫರ್ ತಿರಸ್ಕರಿಸಿದ ಯುವಕ
If you are a group admin, you will be able to delete any message for everyone in your groups, in a future update of WhatsApp beta for Android.
A good moderation, finally. #WhatsApp pic.twitter.com/Gxw1AANg7M
— WABetaInfo (@WABetaInfo) January 26, 2022
ನೀವು ಗ್ರೂಪ್ ಅಡ್ಮಿನ್ ಆಗಿದ್ದರೆ ಮುಂದಿನ ವಾಟ್ಸಪ್ ಆಂಡ್ರಾಯ್ಡ್ ಬೀಟಾ ಅಪ್ಡೇಟ್‍ಗಳಲ್ಲಿ ನೀವು ಗ್ರೂಪ್‍ನ ಯಾವುದೇ ಸಂದೇಶಗಳನ್ನು ಅಳಿಸಲು ಸಾಧ್ಯವಾಗಲಿದೆ ಎಂದು ವೆಬಿಟೈನ್ಫೋ ತಿಳಿಸಿದೆ.
ವಾಟ್ಸಪ್ ವೆಬ್‍ನಲ್ಲಿ ಎರಡು ಹಂತಗಳ ಪರಿಶೀಲನೆಯ(ಟು ಸ್ಟೆಪ್ ವೆರಿಫಿಕೇಷನ್) ಸಾಮರ್ಥ್ಯವನ್ನೂ ಅಭಿವೃದ್ಧಿಪಡಿಸುತ್ತಿದೆ. ಮುಂದಿನ ಅಪ್ಡೇಟ್‍ಗಳಲ್ಲಿ ಅದನ್ನು ಜನರು ಬಳಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ. ಟು ಸ್ಟೆಪ್ ವೆರಿಫಿಕೇಷನ್ ಸೌಲಭ್ಯ ಈಗಾಗಲೇ ಮೊಬೈಲ್ ಅಪ್ಲಿಕೇಶನ್‍ನಲ್ಲಿ ಲಭ್ಯವಿದೆ. ಇದನ್ನೂ ಓದಿ: ಪೆಗಾಸಸ್‌ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗೆ ಮನವಿ
ಇತ್ತೀಚೆಗೆ ವಾಟ್ಸಪ್‍ನಲ್ಲಿ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ವಿಧಾನವನ್ನೂ ಬದಲಾಯಿಸುವುದಾಗಿ ವಾಟ್ಸಪ್ ತಿಳಿಸಿತ್ತು. ಇದರ ಬಗ್ಗೆ ಬೀಟಾ ಅಪ್ಡೇಟ್‍ನಲ್ಲಿ ಸುಳಿವು ನೀಡಿತ್ತು.