ಕೊಡಗು: ಕಾವೇರಿ ಪ್ರವಾಹ ಮಟ್ಟ ಹೆಚ್ಚಾಗಿದ್ದರಿಂದ ನದಿ ಪಾತ್ರದ ದುಬಾರೆ ಬಿಡಾರದಿಂದ ಆನೆಗಳನ್ನು ಕಾಡಿಗೆ ಕರೆದೊಯ್ಯಲಾಗಿತ್ತು. ಸದ್ಯ ಪ್ರವಾಹ ಸ್ವಲ್ಪ ತಗ್ಗಿದ್ದು, ಆನೆಗಳನ್ನು ಮತ್ತೇ ಬಿಡಾರಕ್ಕೆ ವಾಪಾಸ್ ತರಲಾಗಿದೆ.
ದಸರಾ ಮೆರವಣಿಗೆ ಆಯ್ಕೆಯಾಗಿರುವ ಧನಂಜಯ ಸೇರಿದಂತೆ ಏಕದಂತ ಹಾಗೂ ಪುಟ್ಟ ಅಗಸ್ತ್ಯ ಆನೆಗಳು ದುಬಾರೆ ಬಿಡಾರದಲ್ಲಿ ಇವೆ. ಉಳಿದಂತೆ 27 ಆನೆಗಳು ನಿತ್ಯದಂತೆ ಕಾಡಿಗೆ ತೆರಳಿವೆ.
ಕಾವೇರಿ ಪ್ರವಾಹ ಹೆಚ್ಚಾಗಿದ್ದರಿಂದ ಆನೆಗಳಿಗೆ ನೀರು ಕುಡಿಸಲು ಹಾಗೂ ಸ್ನಾನ ಮಾಡಿಸಲು ಕಷ್ಟವಾಗುತ್ತಿತ್ತು. ಜೊತೆಗೆ ನಮಗೂ ನದಿ ದಾಟಿ ಹೋಗಿ ಆಹಾರ ತರಲು ಆಗುತ್ತಿರಲಿಲ್ಲ. ಸುಮಾರು ದಿನಗಳಿಂದ ಬಿಸಿಲು ಕಾಣದೆ, ಬಟ್ಟೆಗಳೇ ಒಣಗುತ್ತಿರಲಿಲ್ಲ. ಹಸಿಯಾದ ಬಟ್ಟೆಗಳನ್ನೇ ತೊಟ್ಟು ಕಾಣೆಗಳ ಹಿಂದೆ ಹೋಗಿ, ಮೇಯಿಸಿಕೊಂಡು ಬರಬೇಕಿತ್ತು. ಊಟಕ್ಕಾಗಿ 10 ಕಿ.ಮೀ. ದೂರದ ಹೋಟೆಲ್‍ಗೆ ನಡೆದು ಹೋಗಿ, ಊಟ ಮಾಡಿ ಬರಬೇಕಿತ್ತು ಎಂದು ಮಾವುತ ರಾಜು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/Kg6EoTbxYNo