ನೀತಿ ಸಂಹಿತೆ ಉಲ್ಲಂಘನೆ – ಬಿಜೆಪಿ ವಿರುದ್ಧ ಕ್ರಮಕೈಗೊಳ್ಳದ ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಚಾಟಿ

Public TV
1 Min Read
kolkata high court

ಕೊಲ್ಕತ್ತಾ: ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘಿಸಿದ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗದ ನಡೆಗೆ ಕೊಲ್ಕತ್ತಾ ಹೈಕೋರ್ಟ್ (Kolkata High Court) ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ಮುಂದಿನ ಆದೇಶವರೆಗೂ ಟಿಎಂಸಿ ಸರ್ಕಾರದ ವಿರುದ್ಧ ಯಾವುದೇ ಅವಹೇಳನಕಾರಿ ಜಾಹೀರಾತು ಪ್ರಕಟಿಸದಂತೆ ಬಿಜೆಪಿಗೆ (BJP) ಕೋರ್ಟ್ ನಿರ್ಬಂಧ ಹೇರಿದೆ.

Mamata Banerjee BJP

ಮತದಾನದ ಹಿಂದಿನ ದಿನ ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘಿಸಿ ತೃಣಮೂಲ ಕಾಂಗ್ರೆಸ್‌ (TMC) ಸರ್ಕಾರದ ವಿರುದ್ಧ ಬಿಜೆಪಿ ಅವಹೇನಕಾರಿ ಜಾಹೀರಾತು (BJP Advertisement) ಪ್ರಕಟಿಸಿತ್ತು. ಆದರೂ ಬಿಜೆಪಿ ವಿರುದ್ಧ ಕೈಗೊಳ್ಳದ ಚುನಾವಣಾ ಆಯೋಗದ (ECI) ವಿರುದ್ಧ ಟಿಎಂಸಿ, ಹೈಕೋರ್ಟ್ ಮೊರೆ ಹೋಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಬ್ಯಸಾಚಿ ಭಟ್ಟಚಾರ್ಯ ನೇತೃತ್ವದ ಏಕಸದಸ್ಯ ಪೀಠವು ಟಿಎಂಸಿ ಸಲ್ಲಿಸಿದ ದೂರುಗಳನ್ನು ಪರಿಹರಿಸಲು ಆಯೋಗ ತೀವ್ರವಾಗಿ ವಿಫಲವಾಗಿದೆ ಎಂದು ದೂರಿತು. ಇದನ್ನೂ ಓದಿ: ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳಲು ಸಹಕರಿಸಬೇಕು: ಸಿಎಂ ಮನವಿ

BJP

ಟಿಎಂಸಿಯ ದೂರುಗಳನ್ನು ಪರಿಹರಿಸಲು ಚುನಾವಣಾ ಆಯೋಗ ಸಂಪೂರ್ಣವಾಗಿ ವಿಫಲವಾಗಿದೆ. ಚುನಾವಣೆಗಳು ಮುಗಿದ ನಂತರದ ದೂರುಗಳ ಪರಿಹಾರ ಕೋರಿ ನ್ಯಾಯಲಯಕ್ಕೆ ಬರುತ್ತಿವೆ ಎಂದು ಆಶ್ವರ್ಯ ವ್ಯಕ್ತಪಡಿಸಿದರು. ಚುನಾವಣೆ ಮತ್ತು ಮತದಾನದ ಹಿಂದಿನ ದಿನ ಬಿಜೆಪಿಯ ಜಾಹೀರಾತುಗಳು ಮಾದರಿ ನೀತಿ ಸಂಹಿತೆ, ಟಿಎಂಸಿಯ ಹಕ್ಕುಗಳು ಮತ್ತು ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು. ಇದನ್ನೂ ಓದಿ: ಜೈಲಲ್ಲಿ ದೇವರಾಜೇಗೌಡ ಜೀವಕ್ಕೆ ಕುತ್ತು: ಸುರೇಶ್ ಗೌಡ ಸ್ಫೋಟಕ ಹೇಳಿಕೆ

Mamata Banerjee 1

ಟಿಎಂಸಿ ವಿರುದ್ಧ ಮಾಡಲಾದ ಆರೋಪಗಳು ಮತ್ತು ಪ್ರಕಟಣೆಗಳು ಸಂಪೂರ್ಣ ಅವಹೇಳನಕಾರಿ ಮತ್ತು ಪ್ರತಿಸ್ಪರ್ಧಿಗಳನ್ನು ಅವಮಾನಿಸುವ ಮತ್ತು ವೈಯಕ್ತಿಕವಾಗಿ ದಾಳಿ ನಡೆಸುವ ಉದ್ದೇಶವನ್ನು ಹೊಂದಿವೆ. ಆದ್ದರಿಂದ, ಮುಕ್ತ, ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗಾಗಿ, ಮುಂದಿನ ಆದೇಶದವರೆಗೆ ಅಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಬಿಜೆಪಿಗೆ ನಿರ್ಬಂಧ ವಿಧಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ನಿಮ್ಮ ಡಿಜಿಟಲ್‌ ಆರೋಗ್ಯ ಹೇಗಿದೆ? – ಮಿತಿಮೀರಿದ ಎಐ ಬಳಕೆ ತಂದೊಡ್ಡುವ ಅಪಾಯಗಳೇನು? – ತಂತ್ರಜ್ಞರ ಕಳವಳ ಏನು?

Share This Article