ಸಿಂಗಪೂರ: ವರನೊಬ್ಬ ತಾನು ಮದುವೆ ಆಗಬೇಕಿದ್ದ ಹುಡುಗಿಯ ಅಕ್ರಮ ಸಂಬಂಧದ ವಿಡಿಯೋವನ್ನ ಮದುವೆಗೆ ಬಂದಿದ್ದ ಅತಿಥಿಗಳ ಮುಂದೆ ಪ್ಲೇ ಮಾಡಿ ಸೇಡು ತೀರಿಸಿಕೊಂಡಿದ್ದಾನೆ.
ಹೌದು. ಸಿಂಗಪೂರ್‍ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಬೇರೊಬ್ಬ ವ್ಯಕ್ತಿಯ ಜೊತೆ ವಧು ಖಾಸಗಿ ಸಮಯವನ್ನು ಕಳೆಯುತ್ತಿದ್ದ ದೃಶ್ಯಗಳನ್ನ ನೋಡಿ ಅತಿಥಿಗಳು ದಂಗಾಗಿದ್ರು. ಮೊದಲಿಗೆ ವಧು ಹಾಗೂ ವರನ ಈವರೆಗಿನ ರಿಲೇಷನ್‍ಶಿಪ್ ಬಗ್ಗೆ ವಿಡಿಯೋ ಪ್ಲೇ ಆಗುತ್ತಿತ್ತು. ಇದ್ದಕ್ಕಿದ್ದಂತೆ ಆ ದೃಶ್ಯಗಳು ನಿಂತು, ಮಹಿಳೆ ತನ್ನ ಬೇರೊಬ್ಬ ಲವರ್ ಜೊತೆ ಹೋಟೆಲ್ ರೂಮಿಗೆ ಹೋಗುವ ದೃಶ್ಯ ಪ್ಲೇ ಆಗಿದೆ. ನಂತರ ಆ ಇಬ್ಬರೂ ಸಲಿಗೆಯಿಂದ ಸಮಯ ಕಳೆದಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
Advertisement
ಈ ವಿಡಿಯೋ ಮದುವೆ ಸಮಾರಂಭದ ವೇಳೆ ಪ್ಲೇ ಆಗುತ್ತಿದ್ದಂತೆ ಅವಮಾನದಿಂದ ವಧು ರೂಮಿನಿಂದ ಪರಾರಿಯಾಗಿದ್ದಾಳೆ ಎಂದು ವರದಿಯಾಗಿದೆ.
Advertisement
ಶ್ರೀಮಂತ ಉದ್ಯಮಿಯಾಗಿದ್ದ ವರ ತಾನು ಮದುವೆಯಾಗೋ ಯುವತಿ ಬಗ್ಗೆ ತಿಳಿದುಕೊಳ್ಳಲು ಖಾಸಗಿ ಡಿಟೆಕ್ಟೀವ್‍ವೊಬ್ಬರನ್ನ ನೇಮಿಸಿಕೊಂಡಿದ್ದ. ಯಾಕಂದ್ರೆ ಆಕೆ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಆತ ಅನುಮಾನಗೊಂಡಿದ್ದ.
Advertisement
Advertisement
ಅಜಾಕ್ಸ್ ಇನ್ವೆಸ್ಟಿಗೇಷನ್ ಅಂಡ್ ಸೆಕ್ಯೂರಿಟಿ ಸರ್ವೀಸಸ್‍ನ ಡೆಟೆಕ್ಟೀವ್ ಝುವೋ ಈ ಬಗ್ಗೆ ಮಾತನಾಡಿ, ಆ ಯುವತಿ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಬಗ್ಗೆ ನಾನು ನೀಡಿದ ಮಾಹಿತಿಯನ್ನ ಗ್ರಾಹಕ ಮದುವೆ ಕ್ಯಾನ್ಸಲ್ ಮಾಡಲು ಬಳಸಿಕೊಳ್ತಾರೆ ಎಂದುಕೊಂಡಿದ್ದೆ. ಆದ್ರೆ ನನಗೆ ಮದುವೆಗೆ ಆಹ್ವಾನ ನೀಡಿದಾಗ ಶಾಕ್ ಆಗಿತ್ತು ಎಂದಿದ್ದಾರೆ.
ನಾನು 6 ವಾರಗಳವರೆಗೆ ಯುವತಿಯ ಮೇಲೆ ಕಣ್ಣಿಟ್ಟು ನಂತರ ಈ ವಿಷಯವನ್ನ ಗ್ರಾಹಕನಿಗೆ ತಿಳಿಸಿದ್ದೆ. ಮದುವೆ ಸಮಾರಂಭದಲ್ಲಿ ವಿಡಿಯೋ ನೋಡಿದಾಗ ವರನ ಉದ್ದೇಶದ ಬಗ್ಗೆ ಗೊತ್ತಾಯ್ತು. ಸಾಕಷ್ಟು ಅತಿಥಿಗಳ ಎದುರಲ್ಲಿ ವಿಡಿಯೋ ಪ್ಲೇ ಮಾಡಲಾಯ್ತು ಎಂದು ಝುವೋ ಹೇಳಿದ್ದಾರೆ.