ಭೋಪಾಲ್: ಮದುವೆ ಹೀಗೆ ಇರಬೇಕು ಎನ್ನುವ ಕಸನು ಎಲ್ಲರಲ್ಲಿಯೂ ಇರುತ್ತದೆ. ಸಂಭ್ರಮದಲ್ಲಿದ್ದ ಮನೆಯಲ್ಲಿ ಕೊಂಚ ವ್ಯತ್ಯಾಸವಾದರೂ ಮದುವೆ ಕ್ಯಾನ್ಸಲ್ ಮಾಡುವ ಮಟ್ಟಿಗೆ ಜಗಳವಾಗಿದ್ದು, ಮಾತ್ರವಲ್ಲದೇ ಮಂಟಪದಲ್ಲಿಯೇ ಮದುವೆ ಮುರಿದು ಬಿದ್ದಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ. ಇಲ್ಲೊಬ್ಬ ವಧು ವಿಗ್ ಧರಿಸಿದ್ದ ವರನನ್ನು ಕಂಡು ಮದುವೆ ಬೇಡ ಎಂದು ಹೇಳಿರುವ ಘಟನೆ ನಡೆದಿದೆ.
ಮದುವೆ ದಿನ ವರ ವಿಗ್ ಧರಿಸುವುದನ್ನು ನೋಡಿದ ವಧು, ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಘಟನೆ ಇಟಾವಾ ಜಿಲ್ಲೆಯ ಭರ್ತನ ಪ್ರದೇಶದಲ್ಲಿ ನಡೆದಿದೆ.
ನಡೆದಿದ್ದೇನು?: ಮದುವೆ ಮಂಟಪದಲ್ಲಿ ವಧು, ವರರು ಹೂಮಾಲೆಯನ್ನು ಹಾಕಿಕೊಳ್ಳುತ್ತಿರುವಾಗ ವರನ ತಲೆಯನ್ನು ವಧು ಗಮನಿಸಿದ್ದಾಳೆ. ಆದರೆ ಆಕೆಗೆ ಗೊತ್ತಾಗಿಲ್ಲ. ಆದರೆ ಮದುವೆ ಮನೆಯಲ್ಲಿರುವವರು ವರನಿಗೆ ಬೋಳು ತಲೆ ಇದೆ, ಆತ ವಿಗ್ ಧರಿಸಿದ್ದಾನೆ ಎಂದು ಹೇಳಿದ್ದಾರೆ. ಈ ವಿಚಾರ ಕೇಳಿದ ವಧು ಪ್ರಜ್ಞೆ ತಪ್ಪಿ ವೇದಿಕೆ ಮೇಲೆ ಬಿದ್ದಿದ್ದಾಳೆ.
ಪ್ರಜ್ಞೆ ಬಂದ ಬಳಿಕ ಆಕೆ ಮದುವೆಯಾಗಲು ನಿರಾಕರಿಸಿದ್ದಾಳೆ. ಕುಟುಂಬಸ್ಥರು ಆಕೆಗೆ ಮನವೋಲಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆ ಮದುವೆ ಬೇಡ ಎಂದು ನೇರವಾಗಿ ಹೇಳಿದ್ದಾಳೆ. ಈ ಮದುವೆ ಮಂಟಪಕ್ಕೆ ಬಂದಿದ್ದ ಸಂಬಂಧಿಕರು, ಕುಟುಂಬಸ್ಥರು ಬೇಸರದಿಂದ ಹೋಗಿದ್ದಾರೆ.