-ವರನ ವಿರುದ್ಧ ಮದುವೆಯಾಗಬೇಕಿದ್ದ ಯುವತಿ ದೂರು
ಲಕ್ನೋ: ಮದುವೆಯಲ್ಲಿ ರೋಟಿ ಹಂಚಲು ತಡಮಾಡಿದ್ದಕ್ಕೆ ಬೇರೆ ಯುವತಿಯನ್ನು ವರ ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ (Uttar Pradesh) ಚಂದೌಲಿ ಜಿಲ್ಲೆಯ (Chandauli District) ಹಮೀದ್‌ಪುರ (Hamidpur) ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
Advertisement
ಊಟ ಬಡಿಸಲು ತಡವಾದ ಕಾರಣಕ್ಕೆ ವರನು ತನ್ನ ಮದುವೆಯಿಂದ ಹೊರನಡೆದು ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಇದನ್ನು ತಿಳಿದ ವಧು ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.ಇದನ್ನೂ ಓದಿ: Mandya | ಠಾಣೆಯಲ್ಲೇ ಪೊಲೀಸ್ ಪೇದೆ ಮೇಲೆ ವ್ಯಕ್ತಿಯಿಂದ ಹಲ್ಲೆ
Advertisement
Advertisement
ಏಳು ತಿಂಗಳ ಹಿಂದೆ ಮೆಹ್ತಾಬ್ ಎಂಬ ಯುವಕನೊಂದಿಗೆ ವಧುವಿನ ವಿವಾಹ ನಿಶ್ಚಯವಾಗಿತ್ತು. ಡಿ.22 ರಂದು ಕಾರ್ಯಕ್ರಮಗಳು ಪ್ರಾರಂಭವಾಗಿದ್ದವು. ಈ ವೇಳೆ ವರನ ಕಡೆಯವರಿಗೆ ಊಟವನ್ನು ತಡವಾಗಿ ಬಡಿಸಿದ್ದಕ್ಕೆ ಗಲಾಟೆ ಮಾಡಿದ್ದಾರೆ. ವಧುವಿನ ಕಡೆಯವರು ವರನ ಕುಟುಂಬಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಪಟ್ಟರು. 1.5 ಲಕ್ಷ ರೂ. ವರದಕ್ಷಿಣೆ ಸೇರಿದಂತೆ 7 ಲಕ್ಷ ರೂ. ಆರ್ಥಿಕ ನಷ್ಟವನ್ನು ಹೇಳಿಕೊಂಡರು. ಆದರೆ ವರನ ಕಡೆಯವರು ವಧುವಿನ ಮನೆಯವರನ್ನು ದೂಷಿಸುತ್ತಾ ಅಲ್ಲಿಂದ ಹೊರನಡೆದಿದ್ದಾರೆ.
Advertisement
ಬಳಿಕ ವರ ಬೇರೆ ಯುವತಿಯನ್ನು ಮದುವೆಯಾಗಿರುವುದನ್ನು ತಿಳಿದು ವಧು ಇಂಡಸ್ಟ್ರಿಯಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಆದರೆ ವರನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಡಿ.24 ರಂದು ಪೊಲೀಸ್ ವರಿಷ್ಠಾಧಿಕಾರಿಗೆ ವಧು ಮನವಿ ಮಾಡಿಕೊಂಡಿದ್ದಾರೆ. ಆರ್ಥಿಕ ನಷ್ಟ ಹಾಗೂ ವರನ ಕಡೆಯ ಐದು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಭರವಸೆ ನೀಡಿದ್ದು, ಪೊಲೀಸರಿಗೆ ವರನ ಕುಟುಂಬಸ್ಥರನ್ನು ಸಂಪರ್ಕಿಸುವAತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಮನಮೋಹನ್ ಸಿಂಗ್‌ಗೆ ಕೇಂದ್ರ ಸರ್ಕಾರದಿಂದ ಅವಮಾನ – ರಾಹುಲ್ ಗಾಂಧಿ ಆರೋಪ