ಮುಂಬೈ: ಮಹರಾಷ್ಟ್ರಾದ ನಂದೋಡ್‍ನ ಕೋಟಾಗ್ಯಾಲಾದಲ್ಲಿ ವ್ಯಕ್ತಿಯೊಬ್ಬರು ಸಹೋದರಿಯರನ್ನು ಒಂದೇ ದಿನ ಖುಷಿಖುಷಿಯಾಗಿ ಮದುವೆಯಾಗಿದ್ದಾರೆ.
ಸಹೋದರಿಯರಾದ ರಾಜ್‍ಶ್ರೀ ಹಾಗೂ ದುರ್ಪತಾ ಬಾಯಿ, ಸಾಯಿನಾಥ್ ಎಂಬವರನ್ನು ಮದುವೆಯಾಗಿದ್ದಾರೆ. ಕೋಟಾಗ್ಯಾಲಾ ಗ್ರಾಮದ ಗಂಗಾಧರ್ ಶಿರ್ ಗೆರೆ ಅವರಿಗೆ ಮೂವರು ಹೆಣ್ಣುಮಕ್ಕಳು. ರಾಜ್‍ಶ್ರೀ ಮದುವೆ ಮೊದಲು ನಿಶ್ಚಯವಾಗಿತ್ತು. ಮೊದಲ ಮಗಳಾದ ದುರ್ಪತಾ ಬಾಯಿ ಮಾನಸಿಕ ಅಸ್ವಸ್ಥೆ ಆಗಿದ್ದ ಹಿನ್ನೆಲೆಯಲ್ಲಿ ಮದುವೆ ನಿಶ್ಚಯವಾಗಿರಲಿಲ್ಲ.
Advertisement
ರಾಜ್‍ಶ್ರೀಗೆ ತನ್ನ ಸಹೋದರಿ ದುರ್ಪತಾ ಬಾಯಿ ಎಂದರೆ ಬಹಳ ಇಷ್ಟ ಹಾಗೂ ಆಕೆಯನ್ನು ಬಿಟ್ಟಿರಲು ಸಾಧ್ಯವಾಗುತ್ತಿರಲಿಲ್ಲ. ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ ರಾಜ್‍ಶ್ರೀ ತನ್ನ ಅಕ್ಕನ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದಳು. ಈಗ ನನ್ನ ಮದುವೆಯಾಗುತ್ತಿದೆ. ಆದರೆ ನನ್ನ ಅಕ್ಕ ಮಾನಸಿಕ ಅಸ್ವಸ್ಥೆ ಆಕೆಯನ್ನು ಯಾರು ಮದುವೆಯಾಗುತ್ತಾರೆಂದು ರಾಜ್‍ಶ್ರೀ ತನ್ನ ಭಾವಿ ಪತಿ ಸಾಯಿನಾಥ್ ಉರೇಕರ್ ಬಳಿ ತಿಳಿಸಿ ನಮ್ಮಿಬ್ಬರನ್ನು ಮದುವೆಯಾಗಬೇಕು ಎಂದು ಹೇಳಿದ್ದಳು.
Advertisement
ಆರಂಭದಲ್ಲಿ ಈ ಷರತ್ತಿಗೆ ಸಾಯಿನಾಥ್ ಒಪ್ಪಿಗೆ ನೀಡಲಿಲ್ಲ. ಆದರೆ ರಾಜ್‍ಶ್ರೀಗೆ ತನ್ನ ಅಕ್ಕನ ಮೇಲಿರುವ ಪ್ರೀತಿ ಕಂಡು ಸಾಯಿನಾಥ್ ಇಬ್ಬರನ್ನು ಮದುವೆಯಾಗಲೂ ಒಪ್ಪಿಕೊಂಡಿದ್ದಾರೆ. ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರದಲ್ಲಿ ವರ ಸಾಯಿನಾಥ್ ಹಾಗೂ ವಧು ರಾಜ್‍ಶ್ರೀ, ದುರ್ಪತಾ ಬಾಯಿ ಎಂದು ಪ್ರಿಂಟ್ ಮಾಡಿಸಿದ್ದರು.
Advertisement
Advertisement
ಮೇ 2ರಂದು ಅದ್ಧೂರಿಯಾಗಿ ಈ ವಿಶೇಷ ಮದುವೆ ನಡೆದಿದ್ದು, ಈ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ವಿಧವಿಧವಾಗಿ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ.
ಮದುವೆಯಾಗಲೂ ನಾನು ರಾಜ್‍ಶ್ರೀಯನ್ನು ಒಪ್ಪಿಗೊಂಡಿದೆ. ನಂತರ ಅಕ್ಕನ ಸ್ಥಿತಿಯನ್ನು ನೋಡಿ ರಾಜ್‍ಶ್ರೀ ಇಬ್ಬರನ್ನೂ ಮದುವೆ ಆಗಲು ಷರತ್ತು ಹಾಕಿದ್ದಳು. ರಾಜ್‍ಶ್ರೀಗೆ ತನ್ನ ಅಕ್ಕನ ಮೇಲಿರುವ ಪ್ರೀತಿ ಕಂಡು ನನಗೆ ಇಷ್ಟವಾಯಿತು. ಹಾಗಾಗಿ ನಾನು ಈ ಮದುವೆಗೆ ಒಪ್ಪಿಕೊಂಡೆ ಎಂದು ವರ ಸಾಯಿನಾಥ್ ಪ್ರತಿಕ್ರಿಯಿಸಿದ್ದಾರೆ.
ದುರ್ಪತಾ ಬಾಯಿ ಹುಟ್ಟಿದಾಗಿಂದಲೂ ಈಕೆಗೆ ಈ ಅನಾರೋಗ್ಯದ ಸಮಸ್ಯೆ ಇದೆ. ಆಕೆಯ ಚಿಕಿತ್ಸೆಗಾಗಿ 2 ಎಕ್ರೆ ಜಮೀನು ಕೂಡ ಮಾರಿದೆ. ಈ ಅನಾರೋಗ್ಯದ ಸಮಸ್ಯೆಯಿರುವ ಕಾರಣ ಯಾರೂ ಆಕೆಯನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಲಿಲ್ಲ. ಅದಕ್ಕಾಗಿ ರಾಜ್‍ಶ್ರೀ ತನ್ನ ಭಾವಿ ಪತಿಗೆ ಷರತ್ತು ಹಾಕಿದ್ದಳು. ಹಾಗಾಗಿ ಸಾಯಿನಾಥ್ ಮದುವೆಯಾಗಲೂ ಒಪ್ಪಿಕೊಂಡರು ಎಂದು ವಧುವಿನ ತಂದೆ ಗಂಗಾಧರ್ ತಿಳಿಸಿದ್ದರು.
ನನ್ನ ಹಿರಿಮೊಮ್ಮಗಳಿಗೆ ಆರೋಗ್ಯದ ಸಮಸ್ಯೆಯಿದ್ದು, ತಂದೆ-ತಾಯಿ ಬಿಟ್ಟರೆ ಅವಳನ್ನು ನೋಡಿಕೊಳ್ಳಲು ಯಾರಿಲ್ಲ. ಹಾಗಾಗಿ ಅಕ್ಕನ ಜವಾಬ್ದಾರಿಯನ್ನು ತಂಗಿ ತೆಗೆದುಕೊಂಡಿದ್ದಾಳೆ. ದುರ್ಪತಾ ಬಾಯಿಗೆ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ ಇಬ್ಬರು ಮೊಮ್ಮಕ್ಕಳನ್ನು ತನ್ನ ಸಂಬಂಧಿಕರಲೇ ಮದುವೆ ಮಾಡಿಸಿದ್ದೇವೆ. ನಾವು ಅವಿದ್ಯಾವಂತರಾಗಿದ್ದು, ಕಾನೂನಿನ ಬಗ್ಗೆ ಅಷ್ಟು ತಿಳಿದಿಲ್ಲ. ಆದರೆ ಈ ಮದುವೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇರುವುದ್ದಿಲ್ಲ ಎಂದು ಯಾರೋ ತಿಳಿಸಿದ್ದರು. ಈಗ ನಮಗೆ ಭಯವಾಗುತ್ತಿದೆ ಎಂದು ವಧುವಿನ ಅಜ್ಜಿ ಕಾಂತಾಬಾಯಿ ಶಿರ್ ವಾಲೆ ಹೇಳಿದರು.