ಹಾರ ಬದಲಾಯಿಸಿಕೊಂಡ ಆದ್ರೆ ತಾಳಿ ಮಾತ್ರ ಮದುಮಗಳ ಅಕ್ಕನಿಗೆ ಕಟ್ಟಿದ!

Public TV
2 Min Read
MARRIAGE THALI

ಪಾಟ್ನಾ: ಮದುವೆ ಮಂಟಪದಲ್ಲಿ ವರನೊಬ್ಬ ಹಾರ ಬದಲಾಯಿಸಿಕೊಂಡು ಬಳಿಕ ತಾಳಿ ಮಾತ್ರ ಮದುಮಗಳ ಸಹೋದರಿಗೆ ಕಟ್ಟಿದ (Marriage Twist) ವಿಲಕ್ಷಣ ಘಟನೆಯೊಂದು ಬಿಹಾರ (Bihar) ದ ಸರನ್ ಜಿಲ್ಲೆಯಲ್ಲಿ ನಡೆದಿದೆ.

ಛಪ್ರಾ ನಿವಾಸಿ ರಾಜೇಶ್ ಕುಮಾರ್ ಗೆ ಗೆಳತಿ ಪುತುಲ್ ಎಂಬಾಕೆಯ ಸಹೋದರಿ ರಿಂಕು ಕುಮಾರಿ ಎಂಬಾಕೆಯ ಜೊತೆ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಮದುವೆಗೆ ಎಲ್ಲಾ ತಯಾರಿಗಳು, ಸಂಪ್ರದಾಯಗಳು ನಡೆಯುತ್ತಿದ್ದವು. ಅಲ್ಲದೆ ಇನ್ನೇನು ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಗೆಳತಿ ಪುತುಲ್ ನಿಂದ ಕರೆ ಬಂದಿದೆ. ಆದರೆ ಈ ಕರೆಯು ಬೆದರಿಕೆ ಕರೆಯಾಗಿತ್ತು.

Mobile phone video

ಹೌದು. ನೀನು ಆಕೆಯನ್ನು ಮದುವೆಯಾದರೆ ನಾನು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಳು. ಇದನ್ನು ಕೆಳಿದ ವರ ಕೂಡಲೇ ಮದುವೆ ನಿಲ್ಲಿಸಿದ್ದು, ಸ್ಥಳದಿಂದ ತೆರಳಿದ್ದಾನೆ. ವರನ ಈ ನಡೆ ಕಂಡು ಮದುವೆಗೆ ಆಗಮಿಸಿದವರಿಗೆ ಶಾಕ್ ನೀಡಿತ್ತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ರಾಜೇಶ್ ಸ್ಪಷ್ಟನೆ ನೀಡಿದ್ದಾನೆ. ಛಾಪ್ರಾದಲ್ಲಿ ನಾನು ಹಾಗೂ ಪುತುಲ್ ಆಗಾಗ ಭೇಟಿಯಾಗುತ್ತಿದ್ದೆವು. ನಾನು ಆಕೆಯನ್ನು ಪ್ರೀತಿ(Love) ಸುತ್ತಿದ್ದೆ ಎಂದು ತನ್ನ ಕುಟುಂಬಕ್ಕೆ ಬಹಿರಂಗಪಡಿಸಿದನು. ಇದನ್ನೂ ಓದಿ: ಚುನಾವಣಾ ಅಧಿಕಾರಿಗಳಿಂದ ರಾಜ್ಯಾದ್ಯಂತ 145 ಕೋಟಿ ರೂ. ನಗದು ಜಪ್ತಿ – ಯಾವ ಜಿಲ್ಲೆಯಲ್ಲಿ ಎಷ್ಟು ಸೀಜ್?

MARRIAGE

ಇತ್ತ ರಿಂಕು ಜೊತೆ ಮದುವೆ ಫಿಕ್ಸ್ ಆಗುತ್ತಿದ್ದಂತೆಯೇ ಪುತುಲ್ ವಿಚಲಿತಗೊಂಡಿದ್ದಾಳೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು ಎಂದು ಕೂಡ ತಿಳಿಸಿದ್ದಾನೆ. ರಾಜೇಶ್ ಈ ರೀತಿ ಹೇಳುತ್ತಿದ್ದಂತೆಯೇ ಎರಡೂ ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ಜೋರಾಗುತ್ತಿದ್ದಂತೆಯೇ ಮದುವೆಗೆ ಆಗಮಿಸಿದ ಕೆಲ ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿ ಸ್ಥಳಕ್ಕೆ ಕರೆಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಮನವಿ ಮಾಡಿದ್ದಾರೆ.

police jeep 1

ಅಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡೂ ಕುಟುಂಬಗಳನ್ನು ಕುಳಿತುಕೊಳ್ಳಿಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜೇಶ್, ನನಗೆ ರಿಂಕು ಜೊತೆ ಮದುವೆ ಫಿಕ್ಸ್ ಆಗುವ ಮುಂಚೆಯೇ ಆಕೆಯ ಸಹೋದರಿಯಾಗಿರುವ ಪುತುಲ್ ಪರಿಚಯ ಎಂದು ಹೇಳಿದ್ದಾನೆ. ಮಾತುಕತೆಯ ಬಳಿಕ ರಾಜೇಶ್, ರಿಂಕು ಬದಲು ಪುತುಲ್ ಗೆ ತಾಳಿ ಕಟ್ಟಿದ್ದಾನೆ. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿತ್ತು.

Share This Article