– ಖುಷಿಯಲ್ಲಿ ಡ್ಯಾನ್ಸ್ ಮಾಡಿದ್ದೇ ತಪ್ಪಾಯ್ತು
ಹೈದರಾಬಾದ್: ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತವಾಗಿ ವರ ಮೃತಪಟ್ಟಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಗಣೇಶ್ (25) ಮೃತ ವರ. ಈ ಘಟನೆ ಬೋಧನ್ ನಗರದಲ್ಲಿ ನಡೆದಿದೆ. ಮೃತ ಗಣೇಶ್ ಮದುವೆ ಅದ್ಧೂರಿಯಾಗಿ ಶುಕ್ರವಾರ ನಡೆದಿದೆ. ಮದುವೆ ದಿನದ ರಾತ್ರಿ ಮೆರವಣಿಗೆ ನಡೆದಿತ್ತು. ಈ ವೇಳೆ ನವ ದಂಪತಿ ಡಿಜೆ ಮ್ಯೂಸಿಕ್‍ಗೆ ಗುಂಪಿನಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು.
ಡ್ಯಾನ್ಸ್ ಮಾಡಿದ ಕೆಲವೇ ಕ್ಷಣಗಳಲ್ಲಿ ವರ ಗಣೇಶ್‍ಗೆ ಎದೆನೋವು ಕಾಣಿಸಿಕೊಂಡಿದ್ದು, ನೆಲಕ್ಕೆ ಕುಸಿದು ಬಿದ್ದಿದ್ದಾನೆ. ತಕ್ಷಣ ಕುಟುಂಬದವರು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಆದರೆ ವೈದ್ಯರು ಪರೀಕ್ಷೆ ಮಾಡಿ ಹೃದಯಾಘಾತದಿಂದ ಗಣೇಶ್ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ವಿವಾಹವಾದ ತಕ್ಷಣ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.