ಲಕ್ನೋ: ಡಿಜೆ ಹಾಗೂ ರಸ್ತೆ ಲೈಟ್ ವಿಚಾರದಲ್ಲಿ ವಧುವಿನ ಕುಟುಂಬದವರೊಂದಿಗೆ ವಾದ, ವಿವಾದ ನಡೆದ ಹಿನ್ನೆಲೆಯಲ್ಲಿ ವರನೊಬ್ಬ (Groom) ಮದುವೆಯನ್ನು (Wedding) ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಅಲಹಾಬಾದ್‍ನ ಬರಹುಲಾ ಗ್ರಾಮದಲ್ಲಿ ವರದಿಯಾಗಿದೆ.
ಮಿಜಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಲಿಯಾ ಮೂಲದ ವರನಿಗೆ ಬರಹುಲಾದ ವಧುವನ್ನು ಮದುವೆಯಾಗಲು ನಿಶ್ಚಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವರನ ಕಡೆಯವರು ಬರಹುಲಾದ ವಧುವಿನ ಮನೆಗೆ ಮೆರವಣಿಗೆಯ ಮೂಲಕ ಬರುತ್ತಿದ್ದರು. ಆದರೆ ಈ ವೇಳೆ ಆರ್ಕೆಸ್ಟ್ರಾ ಕಲಾವಿದರು ತಡವಾಗಿ ಬಂದಿದ್ದಾರೆ. ಜೊತೆಗೆ ರಸ್ತೆ ದೀಪವು (Road Light) ಇರಲಿಲ್ಲ. ಇದರಿಂದಾಗಿ ವರ ಹಾಗೂ ವಧುವಿನ ಕಡೆಯವರ ನಡುವೆ ವಾಗ್ವಾದ ನಡೆದಿದೆ.
Advertisement
Advertisement
ಈ ವೇಳೆ ವರ ಮದುವೆಯನ್ನು ರದ್ದು ಪಡಿಸಿದ್ದಾನೆ. ಆದರೆ ಅಲ್ಲಿದ್ದ ಗ್ರಾಮಸ್ಥರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅಷ್ಟರಾಗಲೇ ವರ ಹೊರಟು ಹೋಗಿದ್ದ. ಇದರಿಂದಾಗಿ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ನನ್ನ ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕಿದ್ರು: ಪರಾಜಿತ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಸ್ವ ಪಕ್ಷದ ವಿರುದ್ಧ ಕಿಡಿ
Advertisement
Advertisement
ಅಷ್ಟೇ ಅಲ್ಲದೇ ವರನಿಗೆ ವರದಕ್ಷಿಣೆ ಹಾಗೂ ಬೈಕ್ ನೀಡಲು ಜಮೀನನ್ನು ಅಡವಿಟ್ಟಿರುವುದಾಗಿ ವಧುವಿನ ಸಹೋದರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವರನ ತಂದೆಯನ್ನು ಕರೆಸಿದ್ದಾರೆ. ಈ ವೇಳೆ ವರನ ತಂದೆ ಕೂಡ ಪೊಲೀಸ್ ಠಾಣೆಗೆ ಬಂದು ತನ್ನ ಮಗ ವಧುವನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ