ಮಹೋಬಾ: ವಧುವಿನ ಮನೆಯಲ್ಲಿ ಮದುವೆಗೆ ಎಲ್ಲ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದವು. ಕಲ್ಯಾಣ ಮಂಟಪಕ್ಕೆ ವರನು ಕುದುರೆ ಮೇಲೆ ಬಂದು ಎಲ್ಲವೂ ಕೊನೆಯ ಹಂತ ತಲುಪಿತ್ತು. ಆದರೆ ಕೊನೆ ಗಳಿಗೆಯಲ್ಲಿ ವರ ಮಾತ್ರ ವಧುವಿನ ಬಗ್ಗೆ ಒಂದು ವಿಷಯ ಕೇಳಿ ನನಗೆ ಮದುವೆ ಬೇಡ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದ. ಆದರೆ ಕೊನೆಗೆ ತನ್ನ ತಪ್ಪಿನ ಅರಿವಾಗಿ ಆಕೆಯನ್ನೇ ಮದುವೆಯಾಗಿದ್ದಾನೆ.
ಇದನ್ನೂ ಓದಿ :ಆರತಕ್ಷತೆ ವೇಳೆ ಹೀಲ್ಡ್ ಚಪ್ಪಲಿ ಧರಿಸಿ, ಸುಸ್ತಾಗಿ ಬಿದ್ದ ವಧು- ಮದುವೆ ಕ್ಯಾನ್ಸಲ್!
Advertisement
ರಾಜಸ್ಥಾನ ರಾಜ್ಯದ ಮಹೋಬಾ ಜಿಲ್ಲೆಯ ಟಿಕರಿಯಾ ಎಂಬ ಗ್ರಾಮದಲ್ಲಿ ಮೇ 11ರಂದು ಮದುವೆ ಮುರಿದು ಬೀಳುವ ಹಂತಕ್ಕೆ ತಲುಪಿತ್ತು. ಗ್ರಾಮದ ಕಾಲಿಚರಣ್ ರಜಪೂತ್ ಅವರ ಮಗಳು ತೀಜಾರ ಮದುವೆಯನ್ನು ಅಕೌನಿ ಪಟ್ಟಣದ ಜಯ್‍ಹಿಂದ್‍ರೊಂದಿಗೆ ನಿಶ್ಚಯವಾಗಿತ್ತು. ಈ ವೇಳೆ ವರನಿಗೆ ಯಾರೋ ಬಂದು ವಧುವಿಗೆ ಬಿಳಿ ಮಚ್ಚೆಯಿದೆ ಎಂದು ಹೇಳಿದ್ದಾರೆ.
Advertisement
ಇದನ್ನೂ ಓದಿ : ಇಂದು ನಡೆಯಬೇಕಿದ್ದ ಯುವತಿಯ ಮದುವೆ 1 ವರ್ಷ ಪೋಸ್ಟ್ ಪೋನ್ ಆಯ್ತು!
Advertisement
ಈ ವಿಚಾರ ಕಿವಿಗೆ ಬಿದ್ದಿದೆ ತಡ ವರ ನನಗೆ ಈ ಮದುವೆ ಬೇಡ ಎಂದು ಮನೆಯತ್ತ ನಡೆದಿದ್ದಾನೆ. ಇದ್ರಿಂದ ಕೋಪಗೊಂದು ವಧುವಿನ ತಂದೆ ಕಾಲಿಚರಣ್ ಅಜನರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
ಇದನ್ನೂ ಓದಿ : ಆರತಕ್ಷತೆಯಲ್ಲಿ ಊಟ ಶಾರ್ಟೇಜ್ ಆಗಿದ್ದಕ್ಕೆ ಮದ್ವೆ ಕ್ಯಾನ್ಸಲ್?
ಪೊಲೀಸರು ವರ ಮತ್ತು ವಧು ಇಬ್ಬರನ್ನೂ ಠಾಣೆಗೆ ಕರೆಸಿದ್ದಾರೆ. ಕೊನೆಗೆ ವರನ ಸಂಬಂಧಿಯ ಮಹಿಳೆಯೊಬ್ಬರು ಖಾಸಗಿ ರೂಂನಲ್ಲಿ ವಧುವನ್ನು ಪರೀಕ್ಷಿಸಿದಾಗ ಯಾವುದೇ ತರಹದ ಬಿಳಿ ಮಚ್ಚೆ ಕಂಡುಬಂದಿಲ್ಲ. ತನ್ನ ತಪ್ಪಿನ ಅರಿವಾದ ವರ ಜಯ್ ಎಲ್ಲರನ್ನೂ ಕ್ಷಮೆ ಕೇಳಿ ಪೊಲೀಸ್ ಠಾಣೆಯ ಮೈದಾನದಲ್ಲಿದ್ದ ದೇವಸ್ಥಾನದಲ್ಲಿ ವಧು ತೀಜಾರಿಗೆ ತಾಳಿ ಕಟ್ಟಿದ್ದಾನೆ.
ಇದನ್ನೂ ಓದಿ: ವಧು ನಾಪತ್ತೆ: ಮದುವೆ ಮುಂದೂಡಲಾಗಿದೆ ಎಂದು ಮಂಟಪದ ಮುಂದೆ ಬೋರ್ಡ್