ಚೆನ್ನೈ: ಮದುವೆಯಾಗಿ ಒಂದು ಗಂಟೆಯಲ್ಲೇ ವರ ಕಿಡ್ನಾಪ್ ಆದ ಪ್ರಕರಣವೊಂದು ತಮಿಳುನಾಡಿನ ಚೆನ್ನೈನಲ್ಲಿರುವ ಸೇಲಂನಲ್ಲಿ ನಡೆದಿದೆ.
ಸಿವನಂದಂ(23) ಕಿಡ್ನಾಪ್ ಆದ ವರ. ಸಿವನಂದಂ ಪ್ಲಾಸ್ಟಿಕ್ ತಯಾರಿಕಾ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಅದೇ ಕಂಪೆನಿಯ ಪೂರ್ಣಿಮಾಳನ್ನು ಸಿವನಂದಂ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದನು.
Advertisement
ಸಿವನಂದಂ ಹಾಗೂ ಪೂರ್ಣಿಮಾ ಇಬ್ಬರು ತಮ್ಮ ಪ್ರೀತಿ ಬಗ್ಗೆ ತಮ್ಮ-ತಮ್ಮ ಮನೆಯವರಿಗೆ ತಿಳಿಸಿದ್ದರು. ಈ ವೇಳೆ ಪೂರ್ಣಿಮಾ ಪೋಷಕರು ಇಬ್ಬರ ಪ್ರೀತಿಯನ್ನು ಒಪ್ಪಿ ಮದುವೆಗೂ ಸಮ್ಮತಿ ಸೂಚಿಸಿದ್ದರು. ಆದರೆ ಸಿವನಂದಂ ಪೋಷಕರು ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.
Advertisement
Advertisement
ಕಳೆದ ಶುಕ್ರವಾರ ಪೂರ್ಣಿಮಾ ಪೋಷಕರ ಸಮ್ಮುಖದಲ್ಲಿ ಸಿವನಂದಂ ಹಾಗೂ ಪೂರ್ಣಿಮಾ ಪಚ್ಚಾಯಪ್ಪಂ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಬಳಿಕ ದಂಪತಿ ಸಂಗಮೇಶ್ವರ್ ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸಿವನಂದಂ ಹಾಗೂ ಪೂರ್ಣಿಮಾ ಇಬ್ಬರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ 20 ಜನರ ತಂಡ ಅವರಿಬ್ಬರನ್ನು ನಿಲ್ಲಿಸಿ ಸಿವನಂದಂನನ್ನು ಕಿಡ್ನಾಪ್ ಮಾಡಿದೆ.
Advertisement
ಈ ಬಗ್ಗೆ ಪೂರ್ಣಿಮಾ ಭವಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಕಿಡ್ನಾಪರ್ಸ್ ಕಾರ್ ಹಾಗೂ 5 ಬೈಕಿನಲ್ಲಿ ಬಂದು ಸಿವನಂದಂನನ್ನು ಕಿಡ್ನಾಪ್ ಮಾಡಿದ್ದಾರೆ. ನಾನು ಆತನನ್ನು ರಕ್ಷಿಸಲು ಹೋದಾಗ ಅವರು ನನ್ನನ್ನು ತಳ್ಳಿದ್ದಾರೆ. ಅಲ್ಲದೇ ಕಿಡ್ನಾಪ್ ಮಾಡಿದ ಆ ಗ್ಯಾಂಗ್ನಲ್ಲಿ ಐವರು ತನ್ನ ಆಫೀಸಿನ ಸಹದ್ಯೋಗಿಗಳು ಎಂದು ಪೂರ್ಣಿಮಾ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಭವಾನಿ ಪೊಲೀಸ್ ಠಾಣಾ ಪೊಲೀಸರು ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv