ಮಡಿಕೇರಿ: ಮೈಸೂರಿನಿಂದ ತನ್ನ ಸಂಬಂಧಿಕರ ಮನೆಗೆ ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಹಸೆಮಣೆ ಏರುವ ಮುನ್ನವೇ ಮಸಣ ಸೇರಿದ ಘಟನೆ ಮಡಿಕೇರಿಯ ಹೊರವಲಯದಲ್ಲಿ ನಡೆದಿದೆ.
ಸೋಮವಾರ ರಾತ್ರಿ ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಮೈಸೂರಿನ ವಿಶ್ವನಾಥ್ (32), ಅತ್ತಿಗೋಡಿನ ದಿನೇಶ್(23) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪರೀಕ್ಷೆಗೆ ತೆರಳೋ ಮುನ್ನ ಮೊಟ್ಟೆ ಬೇಯಿಸಲು ಹೋಗಿ ಅಗ್ನಿ ಅವಘಡ- ವಿದ್ಯಾರ್ಥಿನಿ ಸಾವು
ಇದೇ ಸೆಪ್ಟೆಂಬರ್ 19 ರಂದು ವಿವಾಹ ಇದ್ದಿದ್ದರಿಂದ ಆಹ್ವಾನ ಪತ್ರಿಕೆ ನೀಡಲು ಮಡಿಕೇರಿಗೆ ವಿಶ್ವನಾಥ್ ಹಾಗೂ ದಿನೇಶ್ ಇಬ್ಬರು ಬೈಕ್ ನಲ್ಲಿ ಬಂದಿದ್ದಾರೆ. ಇತ್ತೀಚೆಗೆ ಎಲ್‍ಎಲ್‍ಬಿ ಮುಗಿಸಿ ಪ್ರಾಕ್ಟೀಸ್ ಆರಂಭಿಸಿದ್ದ ವಿಶ್ವನಾಥ್, ಪದವಿ ಓದುತ್ತಿದ್ದ ದಿನೇಶ್ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಇದೀಗ ಮಡಿಕೇರಿ ನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್ ನಿಯಮ ಮೀರಿ ವೈರಸ್ ಹರಡಿದ ವ್ಯಕ್ತಿ – 5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್