ಮದುವೆಯಲ್ಲಿ ವಧು ಡ್ಯಾನ್ಸ್ ಮಾಡಿರೋ ವಿಡಿಯೋಗಳು ಆಗಾಗ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರೋದು ಸಾಮಾನ್ಯವಾಗಿದೆ. ಆದ್ರೆ ಇದೀಗ ವಿವಾಹ ವೇದಿಕೆಯಲ್ಲೇ ಸ್ನೇಹಿತರ ಜೊತೆ ವರ ಕೂಡ ಡ್ಯಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.
`ದಿ ಬ್ಯಾಕ್ ಬೆಂಚರ್ಸ್’ ಎಂಬ ಫೇಸ್ಬುಕ್ ಪೇಜ್‍ನಲ್ಲಿ ಫೆ.26ರಂದು ಈ ವಿಡಿಯೋವನ್ನು ಹಾಕಲಾಗಿದ್ದು, ಅಪ್‍ಲೋಡ್ ಆದ 2 ದಿನದಲ್ಲೇ 39 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 52 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದು, ಸುಮಾರು ಏಳೂವರೆ ಸಾವಿರ ಮಂದಿ ಕಮೆಂಟ್ಸ್ ಹಾಕಿದ್ದಾರೆ. ಸುಮಾರು 2 ನಿಮಿಷಗಳ ಈ ವಿಡಿಯೋದಲ್ಲಿ ವರ ತನ್ನ ಸ್ನೇಹಿತರ ಜೊತೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ.
ವಿಡಿಯೋದಲ್ಲಿ ವರ ಬೂದು ಬಣ್ಣದ ಸೂಟ್, ಕತ್ತಿನಲ್ಲಿ ವರಮಾಲೆ ಹಾಕಿಕೊಂಡು ವೇದಿಕೆಗೆ ಬಂದಂತಹ ತನ್ನ ಆತ್ಮೀಯ ಗೆಳೆಯರ ಜೊತೆ ಅದ್ಭುತವಾಗಿ ಗಂಗ್ನಂ ಸ್ಟೈಲಿನಲ್ಲಿ ಸ್ಟೆಪ್ ಹಾಕಿದ್ದಾರೆ. ಇತ್ತ ವಧು ಮತ್ತು ನೆರೆದ ಸಂಬಂಧಿಕರು ಗೆಳೆಯರ ಜೊತೆ ವರ ಡ್ಯಾನ್ಸ್ ಮಾಡುತ್ತಿರುವುದನ್ನ ನೋಡಿಯೇ ಬಾಕಿಯಾಗಿದ್ದಾರೆ. ಕೊನೆಗೆ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ವರ ತನ್ನ ವಧುವಿನ ಪಕ್ಕ ಬಂದು ನಿಂತುಕೊಳ್ಳುತ್ತಾರೆ. ಈ ವೇಳೆ ಗೆಳೆಯರು ವೇದಿಕೆಯ ಮಧ್ಯಭಾಗಕ್ಕೆ ಬಂದು ಕುಣಿದು ಕುಪ್ಪಳಿಸಿದ್ದಾರೆ.
- Advertisement
ಮದುವೆ ಮಂಟಪದಲ್ಲೇ ಸಂಭ್ರಮದಲ್ಲಿ ಕುಣಿದ ಈ ವಿಡಿಯೋ ಇದೀಗ ಫೇಸ್ಬುಕ್‍ನಲ್ಲಿ ಭಾರೀ ಸದ್ದು ಮಾಡಿದೆ. ಮಾತ್ರವಲ್ಲದೇ ಕೆಲವರು ಗೇಳೆಯವರು ಅವರ ಗೆಳೆಯರಿಗೆ ಟ್ಯಾಗ್ ಮಾಡುವ ಮೂಲಕ ಅವರ ಮದುವೆಯಲ್ಲಿಯೂ ಇದೇ ರೀತಿ ಸ್ಟೆಪ್ ಹಾಕಬೇಕೆಂದು ಹೇಳಿಕೊಂಡಿದ್ದಾರೆ. ಇನ್ನು ಈ ಮದುವೆ ಎಲ್ಲಿ, ಯಾವಾಗ ನಡೆಯಿತು ಎಂಬುವುದರ ಬಗ್ಗೆ ಮಾಹಿತಿಯಿಲ್ಲ.
- Advertisement