ತಾಳಿ ಕಟ್ಟಿ ನೇರವಾಗಿ ಮದುವೆ ಡ್ರೆಸ್‌ನಲ್ಲೇ ಮತಗಟ್ಟೆಗೆ ಬಂದು ಮತದಾನ ಮಾಡಿದ ವರ

Public TV
1 Min Read
WEDDING bidar vote

ಬೀದರ್ : ಮತದಾನ ಮಾಡಲು ಜನರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಆರೋಪದ ಮಧ್ಯೆ ತಾಳಿ ಕಟ್ಟಿ ನೇರವಾಗಿ ಮದುವೆ ಡ್ರೆಸ್‌ನಲ್ಲೇ ವರ ಮತದಾನ ಕೇಂದ್ರಕ್ಕೆ ಬಂದು ತನ್ನ ಮತದಾನದ (Vote) ಹಕ್ಕು ಚಲಾಯಿಸಿದ್ದಾರೆ.

ವರ ಕಾರ್ತಿಕ್‌ ಪಾಟೇಲ್‌ ಮತದಾನ ಮಾಡಿದ ವ್ಯಕ್ತಿ. ಬೀದರ್‌ನ (Bidar) ಓಲ್ಡ್ ನಾವದಗಿಯಲ್ಲಿರುವ ತಮ್ಮ ಮನೆಯಲ್ಲೇ ಮದುವೆಯಿತ್ತು. ಈ ವೇಳೆ ಕಾರ್ತಿಕ್‌ ವಧುವಿಗೆ ತಾಳಿ ಕಟ್ಟಿ ಬಳಿಕ ಕುಟುಂಬ ಸಮೇತರಾಗಿ ನೇರವಾಗಿ ಮತಗಟ್ಟೆಗೆ ಬಂದಿದ್ದಾರೆ. ನಂತರ ಮತದಾನ ಮಾಡಿದರು. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

ಈ ವೇಳೆ ಮಾತನಾಡಿದ ಕಾರ್ತಿಕ್‌ ಪಾಟೀಲ್‌ ಅವರು, ಇದು ಪ್ರಜಾಪ್ರಭುತ್ವದ ಹಬ್ಬ. ಹೀಗಾಗಿ ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ನಾನು ಕೂಡಾ ತಾಳಿ ಕಟ್ಟಿ ನೇರವಾಗಿ ಮತಗಟ್ಟೆ ಬಂದು ಮತದಾನ ಮಾಡಿದ್ದು ನಾವು ಅಭಿವೃದ್ಧಿಗಾಗಿ ಮತದಾನ ಮಾಡೋಣ ಎಂದು ವರ ಸಮಾಜಕ್ಕೆ ಮತದಾನ ಮಹತ್ವದ‌ ಸಂದೇಶ ನೀಡಿದರು. ಇದನ್ನೂ ಓದಿ: ಚುನಾವಣಾ ಕರ್ತವ್ಯದಿಂದ ಎಸ್ಕೇಪ್ ಆಗಲು ನಕಲಿ ಕೋವಿಡ್ ರಿಪೋರ್ಟ್ – ಶಿಕ್ಷಕಿ ವಿರುದ್ಧ ಎಫ್‌ಐಆರ್

Share This Article