ಕೋಲ್ಕತ್ತಾ: ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿ ವರನೊಬ್ಬ ತನ್ನ ಮದುವೆಗೆ ಕುದುರೆ ಬದಲು ರೋಡ್ ರೋಲರ್‌ನಲ್ಲಿ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದಾನೆ.
ವರ ಅರ್ಕಾ ಪತ್ರಾ ಅಕ್ಕಸಾಲಿಗನ ಮಗನಾಗಿದ್ದು, ತನ್ನ ಮದುವೆಯಲ್ಲಿ ರೋಡ್ ರೋಲರ್‌ನಲ್ಲಿ ಎಂಟ್ರಿ ನೀಡಿದ್ದಾನೆ. ಅರ್ಕಾ ಜಿಲ್ಲೆಯ ಕೃಷ್ಣನಗರದ ಉಖಿಲ್ಪಾರದಲ್ಲಿದ್ದ ಮದುವೆ ಮನೆಗೆ ಅಲಂಕರಿಸಿದ ರೋಡ್ ರೋಲರ್ ನಿಂದ ಹೊರಗೆ ಬರುವಾಗ ಆತನ ಸ್ವಾಗತಕ್ಕೆಂದು ನಿಂತಿದ್ದ ಅತಿಥಿಗಳು ವರನನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.
Advertisement
Advertisement
ನಾನು ನನ್ನ ಮದುವೆಯನ್ನು ನೆನಪಿಗಾಗಿ ಹಾಗೂ ವಿಭಿನ್ನವಾಗಿ ಮಾಡಬೇಕು ಎಂದು ನಿರ್ಧರಿಸಿದೆ. ನಾನು ವಿಂಟೇಜ್ ಕಾರಿನಲ್ಲೇ ಮದುವೆಗೆ ಎಂಟ್ರಿ ಕೊಡಬಹುದಿತ್ತು. ಆದರೆ ಇದು ಹೊಸದಾಗಿ ಇರುವುದಿಲ್ಲ. ಈ ಹಿಂದೆ ಯಾರೋ ಜೆಸಿಬಿಯಲ್ಲಿ ಮದುವೆಗೆ ಎಂಟ್ರಿ ನೀಡಿದ್ದರು ಎಂದು ಕೇಳಿದೆ. ಆದರೆ ರೋಡ್ ರೋಲರ್‌ನಲ್ಲಿ ಇದುವರೆಗೂ ಯಾರೊಬ್ಬ ವರ ಮದುವೆಗೆ ಆಗಮಿಸಿಲ್ಲ ಎಂದು ತಿಳಿಯಿತು. ಹಾಗಾಗಿ ನಾನು ರೋಡ್ ರೋಲರ್‌ನಲ್ಲಿ ಎಂಟ್ರಿ ಕೊಡಲು ನಿರ್ಧರಿಸಿದೆ ಎಂದು ಅರ್ಕಾ ತಿಳಿಸಿದ್ದಾನೆ. ಇದನ್ನು ಓದಿ: ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!
Advertisement
Advertisement
ಅರ್ಕಾ ತನ್ನ ಮದುವೆಗೆ ಕುದುರೆ ಬದಲು ರೋಡ್ ರೋಲರ್‌ನಲ್ಲಿ ಆಗಮಿಸುತ್ತಿರುವುದು ಆತನ ಪತ್ನಿ ಆರುಂಧತಿ ತರಫ್‍ದಾರ್ ಗೆ ಯಾವುದೇ ಅಭ್ಯಂತರ ಇರಲಿಲ್ಲ. ಮದುವೆ ಮೊದಲೇ ಇಬ್ಬರು ಈ ವಿಚಾರದ ಬಗ್ಗೆ ಮಾತನಾಡಿಕೊಂಡಿದ್ದರು.
ಅರ್ಕಾ ಮದುವೆಯಲ್ಲಿ ಯಾವುದೇ ಡಿಜೆ ಇರಲಿಲ್ಲ. ಡಿಜೆ ಬದಲು ವ್ಯಕ್ತಿಯೊಬ್ಬ ಮದುವೆ ಮನೆಯಲ್ಲಿ ಕೊಳಲು ನುಡಿಸುತ್ತಿದ್ದ. ಕೊಳಲು ನುಡಿಸಿದರೆ ಮದುವೆ ಬಂದಿರುವ ಅತಿಥಿಗಳಿಗೆ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಡಿಜಿ ಆಯೋಜಿಸಿರಲಿಲ್ಲ ಎಂದು ಅರ್ಕಾ ಹೇಳಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv