ಮುಂಬೈ: ತನ್ನ ಮದುವೆಯಲ್ಲಿ ತಾನೇ ಮೊಬೈಲ್ ಕದ್ದು ವರ ಪೊಲೀಸರಿಗೆ ಅತಿಥಿಯಾಗಿರುವ ಪ್ರಕರಣವೊಂದು ಮಹಾರಾಷ್ಟ್ರದ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಅಜಯ್ ಸುನೀಲ್ ದೋತೆ ಮೊಬೈಲ್ ಕದ್ದು ಅರೆಸ್ಟ್ ಆದ ವರ. ಚೇಂಬರ್ ನ ಅಮರ್ ಮಹಲ್ ಜಂಕ್ಷನ್ನಲ್ಲಿ ಮಹಿಳೆ ತನ್ನ ಮಗಳ ಜೊತೆಯಿರುವಾಗ ಅಜಯ್ ತನ್ನ ಸ್ನೇಹಿತನ ಜೊತೆ ಬೈಕಿನಲ್ಲಿ ಬಂದು ಮೊಬೈಲ್ ಕದ್ದಿದ್ದಾನೆ.
Advertisement
ಈ ಬಗ್ಗೆ ಮಹಿಳೆ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿತ್ತು. ಮಹಿಳೆಯ ದೂರಿನ ಮೇರೆಗೆ ಮಂಗಳವಾರ ತಿಲಕ್ನಗರ ಪೊಲೀಸರು ವರ ಅಜಯ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.
Advertisement
Advertisement
ಅಜಯ್ ಹಾಗೂ ಆತನ ಸ್ನೇಹಿತ ಕಳ್ಳತನಕ್ಕೆ ಉಪಯೋಗಿಸಿದ ಬೈಕಿನ ನೊಂದಣಿ ಸಂಖ್ಯೆಯನ್ನು ಕಪ್ಪು ಬಣ್ಣದಿಂದ ಮರೆಮಾಚಿಸಿದ್ದರು. ಆದರೆ ವಿಚಾರಣೆ ವೇಳೆ ಸಿಸಿಟಿವಿ ಪರಿಶೀಲಿಸಿದಾಗ ಅದು ಅಜಯ್ ಬೈಕ್ ಎಂಬುದು ತಿಳಿದುಬಂದಿದೆ.
Advertisement
ಅಜಯ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಲು ಪೊಲೀಸರು ಬಾಂದ್ರಾದಲ್ಲಿರುವ ಅಜಯ್ನ ಮನೆಗೆ ಹೋದರು. ಈ ವೇಳೆ ಮದುವೆ ಕಾರ್ಯಕ್ರಮ ನಡೆಯುತ್ತಿದೆ ಎಂಬುದು ಪೊಲೀಸರಿಗೆ ತಿಳಿದಿದೆ. ಆಗ ಪೊಲೀಸರು ಮದುವೆಮನೆಗೆ ಹೋಗಿ ಹಸೆಮಣೆಯಲ್ಲಿದ್ದ ವರ ಅಜಯ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv