ವಿಂಡ್‍ಹೋಕ್: ಸಾಮಾನ್ಯವಾಗಿ ಈ ಫೋಟೋಗಳನ್ನ ನೋಡಿದಾಗ ಸಿಂಹಿಣಿ ಜಿಂಕೆಯನ್ನ ಬೇಟೆಯಾಡಲು ಹಿಡಿದುಕೊಂಡಿದೆ ಎಂದು ಅನ್ನಿಸಬಹುದು. ಆದ್ರೆ ಇದರ ಹಿಂದೆ ಒಂದು ಮನಮುಟ್ಟುವ ಕಥೆಯಿದೆ.
Advertisement
ಸಿಂಹಿಣಿ ಜಿಂಕೆಮರಿಯ ತಲೆಯನ್ನ ನೆಕ್ಕುತ್ತಾ, ಅದನ್ನ ಆರೈಕೆ ಮಾಡುತ್ತಾ ಮರಿಯ ರಕ್ಷಣೆಗೆ ನಿಂತಿರೋದನ್ನ ಫೋಟೋಗಳಲ್ಲಿ ಕಾಣಬಹುದು. ನೈಋತ್ಯ ಆಫ್ರಿಕಾದ ನಮೀಬಿಯಾದ ಇಟೋಶಾ ಪ್ಯಾನ್ ಗೇಮ್ ರಿಸರ್ವ್ ನಲ್ಲಿ ಈ ದೃಶ್ಯವನ್ನು ಕಂಡು ಅಮೆರಿಕದ ಫೋಟೋಗ್ರಾಫರ್ ಗೋರ್ಡನ್ ಡೊನೋವ್ಯಾನ್ ಆಶ್ಚರ್ಯಚಕಿತರಾಗಿದ್ರು. ಡೊನೋವ್ಯಾನ್ ಸಿಂಹಿಣಿ ಹಾಗೂ ಜಿಂಕೆಮರಿ ನಡುವಿನ ಈ ಅಪೂರೂಪದ ಬಾಂಧವ್ಯವನ್ನ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
Advertisement
Advertisement
ವಿರೋಧಿ ತಂಡದ ಸಿಂಹವೊಂದು ಸಿಂಹಗಳ ಗುಂಪನ್ನ ಆಕ್ರಮಿಸಿಕೊಂಡ ಬಳಿಕ ಸಿಂಹಿಣಿಯ ಎರಡು ಗಂಡು ಮರಿಗಳನ್ನ ಕೊಂದುಹಾಕಿತ್ತು. ಇದರಿಂದ ದುಃಖದಲ್ಲಿದ್ದ ಸಿಂಹಿಣಿ, ಜಿಂಕೆ ಮರಿಯನ್ನ ತನ್ನ ಮರಿಯಂತೆಯೇ ಆರೈಕೆ ಮಾಡ್ತಿದೆ ಅಂತ ಗೋರ್ಡನ್ ಅವರಿಗೆ ಇಲ್ಲಿನ ಗೈಡ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಜಿಂಕೆಗಳು ಸಿಂಹಗಳಿಗೆ ಆಹಾರ. ಆದ್ರೆ ದುಃಖದಲ್ಲಿರುವ ಸಿಂಹಿಣಿ ಜಿಂಕೆಮರಿಯನ್ನ ಕೊಲ್ಲೋ ಬದಲು ಅದನ್ನ ದತ್ತು ಪಡೆದು ಆರೈಕೆ ಮಾಡ್ತಿದೆ.
Advertisement
ಇದೊಂದು ವಿಚಿತ್ರ ಆದರೂ ಆಶ್ಚರ್ಯಕರ ದೃಶ್ಯವಾಗಿತ್ತು. ಸಿಂಹಿಣಿ ಜಿಂಕೆಮರಿಯನ್ನ ಕೊಂದುಬಿಡುತ್ತದೆ ಎಂದು ನಾನು ಕಾಯುತ್ತಿದ್ದೆ, ಆದ್ರೆ ಅದು ಆಗಲೇ ಇಲ್ಲ. ಸಿಂಹಿಣಿ ಬಂದು ಜಿಂಕೆಮರಿಯ ತಲೆಯನ್ನ ಸವರಲು ಶುರು ಮಾಡಿತು. ಪ್ರಕೃತಿಯ ನಿಗೂಢವೇ ಇಂಥದ್ದು. ಮುಂದೆ ಏನಾಗುತ್ತದೆ ಎಂದು ತಿಳಿಯಲು ಸಾಧ್ಯವಾಗಲ್ಲ ಎಂದು ಗೋರ್ಡನ್ ಹೇಳಿದ್ದಾರೆ.
ಗೋರ್ಡನ್ ಈ ದೃಶ್ಯವನ್ನ ಸುಮಾರು 2 ಗಂಟೆಗಳ ಕಾಲ ವೀಕ್ಷಿಸಿದ್ದಾಗಿ ಹೇಳಿದ್ದಾರೆ.