– ಮೆಣಸಿನಕಾಯಿ ಬೆಲೆಯೂ ಏರಿಕೆ, ಬಾಯಿ ಮಾತ್ರವಲ್ಲ ಜನರ ಜೇಬಿಗೂ ಖಾರ
ನವದೆಹಲಿ: ಬೆಲೆ ಏರಿಕೆಯಲ್ಲಿ ಟೊಮೆಟೊ (Tomato) ಬಳಿಕ ಈಗ ಮೆಣಸಿನಕಾಯಿ (Green Chilli) ಸರದಿ ಶುರುವಾಗಿದೆ. ಬಾಯಿಗೆ ಮಾತ್ರವಲ್ಲ, ಜನಸಾಮಾನ್ಯರ ಜೇಬಿಗೂ ಹಸಿರು ಮೆಣಸಿನಕಾಯಿ ಖಾರವಾಗಿದೆ.
ಬೇಸಿಗೆಯ ಬಿಸಿಲು ಹಾಗೂ ಮುಂಗಾರು ಮಳೆ ತಡವಾಗಿದ್ದರಿಂದ ಮೆಣಸಿನಕಾಯಿ ಬೆಲೆಯಲ್ಲಿ (Chilli Price Hike) ಏರಿಕೆ ಕಂಡಿದೆ. ಕಳೆದ ತಿಂಗಳು 60 ರೂ.ಗಳ ಆಸುಪಾಸಿನಲ್ಲಿದ್ದ ಹಸಿರು ಮೆಣಸಿನಕಾಯಿ ಈಗ ಪ್ರತಿ ಕೆಜಿಗೆ 170 ರೂ.ಗಳಿಗೆ ಏರಿಕೆಯಾಗಿದೆ. ಇದರ ಜೊತೆಗೆ ಟೊಮೆಟೊ ಬೆಲೆ ಏರಿಕೆಯೂ ಮುಂದುವರಿದಿದೆ. ಇದನ್ನೂ ಓದಿ: ಬೆಲೆ ಏರಿಕೆ: ಬರ್ಗರ್‌ಗೆ ಟೊಮೆಟೊ ಬಳಸಲ್ಲ ಎಂದ ಮೆಕ್‌ಡೊನಾಲ್ಡ್ಸ್
ಉತ್ತರಾಖಂಡ ರಾಜ್ಯದ ಗಂಗೋತ್ರಿ, ಯಮುನೋತ್ರಿಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 250 ರೂ. ಏರಿಕೆಯಾಗಿದೆ. ಉತ್ತರಕಾಶಿಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 200 ರೂ. ತಲುಪಿದ್ದು, ಕೋಲ್ಕತ್ತಾದಲ್ಲಿ 152 ರೂ., ದೆಹಲಿಯಲ್ಲಿ 120 ರೂ., ಚೆನ್ನೈನಲ್ಲಿ 117 ರೂ., ಮುಂಬೈನಲ್ಲಿ 108 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲೂ 100 ರಿಂದ 130 ರೂ.ವೆರೆಗೆ ಮಾರಾಟವಾಗುತ್ತಿದೆ. ಇದರೊಂದಿಗೆ ಶುಂಠಿ ಹಾಗೂ ಹೂಕೋಸಿನ ಬೆಲೆಯೂ ಹೆಚ್ಚಾಗಿದೆ. ಇದನ್ನೂ ಓದಿ: ರೈಲ್ವೇ ಬ್ರಿಡ್ಜ್ ನಟ್ ಕಳಚಿದ ಕಿಡಿಗೇಡಿಗಳು – ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]