ಸ್ನ್ಯಾಕ್ಸ್‌ಗೆ ಬೆಸ್ಟ್ ಗ್ರೀನ್ ಟೊಮೆಟೋ ಫ್ರೈಸ್

Public TV
1 Min Read
Green Tomato Fries 2

ಹುಳಿಯಾದ ಟೊಮೆಟೋವನ್ನು ಹಸಿಹಸಿಯಾಗಿ ಸವಿಯುವ ಹುಚ್ಚು ಹಲವರಿಗಿದೆ. ಅಂತಹ ಟೊಮೆಟೋ ಪ್ರೇಮಿಗಳಿಗಾಗಿ ನಾವಿಂದು ಸಿಂಪಲ್ ಸ್ನ್ಯಾಕ್ಸ್ ರೆಸಿಪಿಯೊಂದನ್ನು ಹೇಳಿಕೊಡಲಿದ್ದೇವೆ. ಇಲ್ಲಿ ಕಾಯಿ ಟೊಮೆಟೋವನ್ನು ಬಳಸಲಾಗಿದ್ದು, ಅವುಗಳನ್ನು ಹಸಿಯಾಗಿ ಬಡಿಸೋ ಬದಲು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಆದ್ದರಿಂದ ಹಸಿ ಟೊಮೆಟೋ ಪ್ರೇಮಿಗಳು ನೀವಲ್ಲದಿದ್ದರೂ ಇದನ್ನೊಮ್ಮೆ ಟ್ರೈ ಮಾಡಬಹುದು.

Green Tomato Fries

ಬೇಕಾಗುವ ಪದಾರ್ಥಗಳು:
ತೆಳ್ಳಗೆ ಹೆಚ್ಚಿಕೊಂಡ ಗ್ರೀನ್ ಟೊಮೆಟೋ – 1 ಕೆಜಿ
ಬೀಟ್ ಮಾಡಿದ ಮೊಟ್ಟೆ – 2
ಬ್ರೆಡ್ ಕ್ರಂಬ್ಸ್ – 2-3 ಕಪ್
ಉಪ್ಪು – 1 ಟೀಸ್ಪೂನ್
ಮೆಣಸಿನ ಪುಡಿ – ಸ್ವಾದಕ್ಕನುಸಾರ
ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಟೇಸ್ಟಿ ಆಲೂ ಪಾಲಕ್ ಕಟ್ಲೆಟ್ ಟ್ರೈ ಮಾಡಿ ನೋಡಿ..!

Green Tomato Fries 1

ಮಾಡುವ ವಿಧಾನ:
* ಮೊದಲಿಗೆ ಒಂದು ಮಧ್ಯಮ ಬೌಲ್‌ನಲ್ಲಿ ಒಡೆದು ಬೀಟ್ ಮಾಡಿದ ಮೊಟ್ಟೆಯನ್ನು ಹಾಕಿಕೊಳ್ಳಿ.
* ಮತ್ತೊಂದು ಬಟ್ಟಲಿನಲ್ಲಿ ಉಪ್ಪು, ಮೆಣಸಿನ ಪುಡಿ ಹಾಗೂ ಬ್ರೆಡ್ ಕ್ರಂಬ್ಸ್ ಹಾಕಿ ಮಿಶ್ರಣ ಮಾಡಿ ಇಡಿ.
* ಒಂದು ಪ್ಯಾನ್‌ಗೆ ಎಣ್ಣೆ ಸವರಿ, ಮಧ್ಯಮ ಶಾಖದ ಮೇಲೆ ಬಿಸಿ ಮಾಡಿ.
* ಈಗ ಟೊಮೆಟೋ ಸ್ಲೈಸ್‌ಗಳನ್ನು ಮೊದಲು ಮೊಟ್ಟೆಯ ಮಿಶ್ರಣದಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್ ಮಿಶ್ರಣದಲ್ಲಿ ಸುತ್ತಲೂ ಕೋಟ್ ಆಗುವಂತೆ ಉರುಳಿಸಿ, ನಂತರ ಪ್ಯಾನ್‌ಗೆ ಹಾಕಿ. (ಬ್ಯಾಚ್‌ಗಳಲ್ಲಿ ಫ್ರೈ ಮಾಡಬಹುದು)
* ಈಗ ಟೊಮೆಟೋಗಳ ಮೇಲೆ ಸ್ವಲ್ಪ ಎಣ್ಣೆ ಸಿಂಪಡಿಸಿ, 2 ನಿಮಿಷ ಕಾಯಿಸಿದ ಬಳಿಕ ತಿರುವಿ ಹಾಕಿ.
* ಟೊಮೆಟೋಗಳ ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಪ್ಯಾನ್‌ನಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿಕೊಳ್ಳಿ.
* ಇದೀಗ ಗ್ರೀನ್ ಟೊಮೆಟೋ ಫ್ರೈಸ್ ತಯಾರಾಗಿದ್ದು, ಸ್ನ್ಯಾಕ್ಸ್ ಟೈಂನಲ್ಲಿ ಸಾಸ್‌ಗಳೊಂದಿಗೆ ಬೆಚ್ಚಗೆ ಬಡಿಸಿ. ಇದನ್ನೂ ಓದಿ: ಪಾರ್ಟಿಗೆ ಮಾಡಿ ಚೀಸ್ ಚಿಕನ್ ಬಾಲ್ಸ್

Share This Article