-ನಾಲ್ಕು ಹಂತಗಳಲ್ಲಿ ಆಪರೇಷನ್ ಕಮಲ
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳಿಸಬೇಕಾದ್ರೆ ಸಮ್ಮಿಶ್ರ ಸರ್ಕಾರವನ್ನು ಬೀಳಿಸೋದು ಬಿಜೆಪಿಗೆ ಅನಿವಾರ್ಯ ಆದಂತಿದೆ. ಈ ಹಿನ್ನೆಲೆಯಲ್ಲಿ ರಾಜ್ಯನಾಯಕರಿಗೆ ‘ಆಪರೇಷನ್ ಕಮಲ’ಕ್ಕೆ ಮುಂದಾಗಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಸಂದೇಶವನ್ನು ರವಾನಿಸಿದ್ದಾರೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.
ಕಳೆದ ಮೂರು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಈ ಸಂಬಂಧ ದೆಹಲಿಗೆ ತೆರಳಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಆದೇಶವನ್ನು ರಾಜ್ಯಕ್ಕೆ ತಂದಿದ್ದಾರೆ. 16 ರಿಂದ 23 ಶಾಸಕರ ಆಪರೇಷನ್‍ಗೆ ಬಿಜೆಪಿ ಹೈಕಮಾಂಡ್‍ನಿಂದ ಹಸಿರು ನಿಶಾನೆ ಸಿಕ್ಕಿದ್ದು, ಅದಕ್ಕಾಗಿ ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬಿಎಸ್‍ವೈ ಮೆಗಾ ಪ್ಲ್ಯಾನ್ ಮಾಡಿದಾರೆಯಂತೆ. ಒಟ್ಟು ನಾಲ್ಕು ಹಂತಗಳಲ್ಲಿ ರಾಜ್ಯದ ವಿವಿಧ ಭಾಗಗಳ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯುವ ತಂತ್ರ ಎಂದು ಹೇಳಲಾಗುತ್ತಿದೆ.
Advertisement
Advertisement
* ಆಪರೇಷನ್ ಲೋಟಸ್ ನಂಬರ್-1:
1. ಮೊದಲ ಹಂತದಲ್ಲಿ ಒಂದು ಗ್ರೂಪ್‍ನ ಆಪರೇಷನ್ ಲೋಟಸ್‍ಗೆ ಬಿಜೆಪಿ ಮೆಗಾ ಪ್ಲ್ಯಾನ್
2. 11 ಮಂದಿ ಶಾಸಕರ ಒಂದು ಗ್ರೂಪ್‍ಗೆ ಗಾಳ ಹಾಕಲು ಬಿಜೆಪಿಯಿಂದ ಗೇಮ್
3. ಈ ಗ್ರೂಪ್ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಬಲ ಗುಂಪಾಗಿ ವಿಂಗಡಿಸಿದ ಬಿಜೆಪಿ
Advertisement
* ಆಪರೇಷನ್ ಲೋಟಸ್ ನಂಬರ್-2:
1. ಎರಡನೇಯ ಹಂತದಲ್ಲಿ 4 ಶಾಸಕರ ಗ್ರೂಪ್‍ಗೆ ಆಪರೇಷನ್ ಕಮಲಕ್ಕೆ ಮೆಗಾ ಪ್ಲ್ಯಾನ್
2. ಬೆಂಗಳೂರಿಗೆ ಹತ್ತಿರದ ಎರಡು ಜಿಲ್ಲೆಯ ನಾಲ್ಕು ಶಾಸಕರಿಗೆ ಗಾಳ ಹಾಕಲು ರೆಡಿಯಾಗಿರುವ ಬಿಜೆಪಿ
3. ಈ ಗ್ರೂಪ್‍ನಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರಿಬ್ಬರನ್ನ ಸೆಳೆಯಲು ಬಿಜೆಪಿ ಗೇಮ್
Advertisement
* ಆಪರೇಷನ್ ಲೋಟಸ್ ನಂಬರ್-3:
1. ಮೂರನೇ ಹಂತದಲ್ಲಿ ನಾಲ್ವರು ಶಾಸಕರಿಗೆ ಆಪರೇಷನ್ ಲೋಟಸ್‍ಗೆ ಕೈ ಹಾಕಿರುವ ಬಿಜೆಪಿ
2. ಮಧ್ಯಕರ್ನಾಟಕ, ಹೈದರಾಬಾದ್ ಕರ್ನಾಟಕದ ಮೂವರು ಶಾಸಕರಿಗೆ ಗಾಳಕ್ಕೆ ಸ್ಕೆಚ್ ಹಾಕಿರುವ ಬಿಜೆಪಿ
3. ಈ ಗ್ರೂಪ್‍ನಲ್ಲಿ ಕಾಂಗ್ರೆಸ್ ಶಾಸಕರಿಗೆ ಮಾತ್ರ ಸೆಳೆಯಲು ಸರ್ಕಸ್ ನಡೆಸ್ತಿರುವ ಬಿಎಸ್‍ವೈ
* ಆಪರೇಷನ್ ಲೋಟಸ್ ನಂಬರ್-4:
1. ನಾಲ್ಕನೇಯ ಹಂತದಲ್ಲಿ ಮೂವರು ಶಾಸಕರಿಗೆ ಆಪರೇಷನ್ ಕಮಲ ಮಾಡಲು ಪ್ಲ್ಯಾನ್
2. ಬೆಂಗಳೂರು, ಮಲೆನಾಡು ಭಾಗದ ಮೂವರು ಶಾಸಕರಿಗೆ ಗಾಳ ಹಾಕಲು ಸ್ಕೆಚ್ ಹಾಕಿರುವ ಬಿಜೆಪಿ
3. ಈ ಗ್ರೂಪ್‍ನಲ್ಲಿಯೂ ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಆಪರೇಷನ್ ಕಮಲಕ್ಕೆ ಸ್ಕೆಚ್
ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ಬೀಳಿಸಲು ಎಲ್ಲ ರೀತಿಯಿಂದಲೂ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ ಸಚಿವರು ಆರೋಪಿಸುತ್ತಿದ್ದಾರೆ. ಇತ್ತ ಬಿಜೆಪಿ ನಾಯಕರು ನಾವು ಸರ್ಕಾರವನು ಬೀಳಿಸುವ ಪ್ರಯತ್ನ ಮಾಡಲ್ಲ. ರಾಜ್ಯದ ಜನತೆ ಎಲ್ಲವನ್ನು ಗಮನಿಸುತ್ತಿದ್ದು, ಸರ್ಕಾರ ತಾನೇ ಆಗಿಯೇ ಬೀಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv