ನವದೆಹಲಿ: ರಾಜ್ಯ ಕಾಂಗ್ರೆಸ್ ರಾಷ್ಟ್ರ ರಾಜಧಾನಿ ದೆಹಲಿಗೆ ಶಿಫ್ಟ್ ಆಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ, ಅಳೆದು ತೂಗಿ ಸಮರ್ಥರನ್ನು ಆಯ್ಕೆ ಮಾಡಲಾಗುತ್ತಿದೆ.
ಸೋಮವಾರ ನಡೆದ ಸಭೆಯಲ್ಲಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಅನಾರೋಗ್ಯ ಮತ್ತು ವಯಸ್ಸು ಪರಿಗಣಿಸಿ ಒಂದಷ್ಟು ಹಾಲಿಗಳ ಟಿಕೆಟ್‍ಗೆ ಕತ್ತರಿ ಹಾಕಲಾಗಿದ್ದು, ಅವರು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಇದನ್ನೂ ಓದಿ: ದೆಹಲಿಯಲ್ಲಿ ನಡೆಯುತ್ತಿದೆ ಟಿಕೆಟ್ ಸ್ಕ್ರೀನಿಂಗ್- ರೆಬೆಲ್ ಸ್ಟಾರ್ ಅಂಬರೀಶ್‍ಗೆ ನೋ ಟೆನ್ಷನ್
Advertisement
Advertisement
ಮಂಡ್ಯ ಕ್ಷೇತ್ರದಿಂದ ಅಂಬರೀಶ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬಾದಾಮಿಯಿಂದ ಸಿಎಂ ಸ್ಪರ್ಧೆ ಕಾರಣಕ್ಕೆ ಬಿ.ಬಿ ಚಿಮ್ಮನಕಟ್ಟಿ ಸ್ಪರ್ಧೆಗೂ ಬ್ರೇಕ್ ಬಿದ್ದಿದೆ. ಹಾನಗಲ್‍ನಿಂದ ಮನೋಹರ್ ತಹಶೀಲ್ದಾರ್, ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪಗೆ ಟಿಕೆಟ್ ಇಲ್ಲ ಎನ್ನಲಾಗ್ತಿದೆ. ಇಂದಿನ ಸಭೆಯಲ್ಲಿ ಬಾಕಿ ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದ್ದು ಸರ್ವೆ ವರದಿಗಳನ್ನು ಆಧರಿಸಿ ಪಟ್ಟಿ ಅಂತಿಮ ಮಾಡಲಾಗ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಬದಾಮಿಯಿಂದ ಸಿಎಂ ಸ್ಪರ್ಧೆ ಮಾಡ್ತಾರಾ? ಈ ಕ್ಷೇತ್ರ ಸೇಫ್ ಯಾಕೆ?
Advertisement
Advertisement
ಜೊತೆಗೆ ಶಾಸಕರ ಮಕ್ಕಳಿಗೂ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಇಂದು ಸಂಜೆ ವೇಳೆಗೆ ಅಂತಿಮ ಪಟ್ಟಿ ತಯಾರಾಗಲಿದೆ. ಸ್ಕ್ರೀನಿಂಗ್ ಕಮಿಟಿ ಅಂತಿಮಗೊಳಿಸುವ ಪಟ್ಟಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಗೆ ರವಾನೆಯಾಗಲಿದ್ದು, ಬುಧವಾರ ಸಂಜೆ ಅಥವಾ ಗುರುವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?