ಲಾಕ್‍ಡೌನ್ ನಿಂದಾಗಿ ಜನರು ಮನೆಯಲ್ಲಿಯೇ ಇದ್ದಾರೆ. ಕೊರೊನಾ ಆತಂಕದಿಂದಾಗಿ ಹೊರಗೆ ಬರುವಂತಿಲ್ಲ. ಪ್ರತಿನಿತ್ಯ ದೋಸೆ, ಚಪಾತಿ, ರೊಟ್ಟಿ ಜೊತೆ ಅದೇ ಕಾಯಿ ಚಟ್ನಿ, ಪಲ್ಯ ತಿಂದು ಬೇಜಾರು ಆಗ್ತಿದೆಯಾ? ಒಮ್ಮೆ ಬಟಾಣಿ ಚಟ್ನಿ ಟ್ರೈ ಮಾಡಿ. ಬಟಾಣಿ ಚಟ್ನಿ ತಿಂದವರು ಪದೇ ಪದೇ ಕೇಳುತ್ತಾರೆ.
* ಬೇಕಾಗುವ ಸಾಮಗ್ರಿಗಳು
* ಹಸಿ ಬಟಾಣಿ – 1 ಕಪ್
* ಕಾಯಿ ತುರಿ – 1 ಕಪ್
* ಈರುಳ್ಳಿ – 1
* ಹಸಿಮೆಣಸಿನಕಾಯಿ 5-6
* ಶುಂಠಿ – ಬೆಳ್ಳುಳ್ಳಿ – ಸ್ವಲ್ಪ
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ – ಸ್ವಲ್ಪ
* ಕೊತ್ತಂಬರಿ – ಸ್ಪಲ್ಪ
* ಹುಣಸೆಹಣ್ಣು – ಸ್ವಲ್ಪ
Advertisement
ಒಗ್ಗರಣೆಗೆ
* ಎಣ್ಣೆ – ಸ್ವಲ್ಪ
* ಸಾಸಿವೆ
* ಕರಿಬೇವು
* ಕಡ್ಲೆಬೇಳೆ
Advertisement
Advertisement
ಮಾಡುವ ವಿಧಾನ
* ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ.
* ಈಗ ಅದೇ ಪಾತ್ರೆಗೆ ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಸೇರಿಸಿ ಫ್ರೈ ಮಾಡಿ
* ಈಗ ಕಾಯಿ ತುರಿ ಹಾಕಿ ಒಮ್ಮೆ ಕೈಯಾಡಿಸಿ
* ಈಗ ತೊಳೆದ ಹಸಿರು ಹಸಿ ಬಟಾಣಿ, ಹುಣಸೆಹಣ್ಣು ಸೇರಿಸಿ ಅಗತ್ಯಕ್ಕೆ ಬೇಕಾದಷ್ಟು ನೀರು ಸೇರಿಸಿ ಕುದಿಸಿ.
* ಬಟಾಣಿ ಕುದ್ದ ಮೇಲೆ ಒಲೆ ಆರಿಸಿ, ಮಿಶ್ರಣ ತಣ್ಣಗಾಗಲು ಬಿಡಿ.
* ಈಗ ಒಂದು ಜಾರ್‍ಗೆ ಆರಿದ ಮಿಶ್ರಣ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
Advertisement
* ಈಗ ಒಗ್ಗರಣೆಗೆ ಪ್ಯಾನ್ ಇಟ್ಟು ಎಣ್ಣೆ ಬಿಸಿ ಮಾಡಿ.
* ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಸಾಸಿವೆ, ಕಡ್ಲೆಬೇಳೆ, ಕರಿಬೇವು ಸೇರಿಸಿ ಸಿಡಿಸಿ.
* ಒಗ್ಗರಣೆಯನ್ನು ರುಬ್ಬಿದ ಮಿಶ್ರಣಕ್ಕೆ ಸೇರಿಸಿ ಹಸಿರು ಬಟಾಣಿ ಚಟ್ನಿ ರೆಡಿ.