ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ಧ್ವಜ ಹೊಂದಿರುವ 15,400 ಟನ್ ಎಲ್ಪಿಜಿ ಹೊತ್ತ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟಿ ಸುರಕ್ಷಿತವಾಗಿ ಬಂದಿರುವುದಾಗಿ ನವಿ ಮುಂಬೈನ ಜವಾಹರಲಾಲ್ ನೆಹರು ಬಂದರು (Jawaharlal Nehru Port) ಪ್ರಾಧಿಕಾರ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತು ಕದನ ವಿರಾಮದ ಹಿನ್ನೆಲೆ ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರವು ಈ ಬೆಳವಣಿಗೆಯನ್ನು ಗಮನಾರ್ಹ ಎಂದು ಬಣ್ಣಿಸಿದೆ. ಇದನ್ನೂ ಓದಿ: US-Iran Ceasefire| ಹಾರ್ಮುಜ್ನಲ್ಲಿ ಸಂಚಾರಕ್ಕೆ 2 ಹೊಸ ಪರ್ಯಾಯ ಮಾರ್ಗ ಪ್ರಕಟಿಸಿದ IRGC

ಇಂದು, ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದ ಧ್ವಜ ಹೊತ್ತ ಎಲ್ಪಿಜಿ ಹಡಗಾದ ʻಗ್ರೀನ್ ಆಶಾʼ ಜವಾಹರಲಾಲ್ ನೆಹರು ಬಂದರನ್ನ ತಲುಪಿದೆ. ಇದನ್ನು ನಾವು ಹೆಮ್ಮೆಯಿಂದ ಸ್ವಾಗತಿಸಿದ್ದೇವೆ ಎಂದು ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ತಿಳಿಸಿದೆ. ಇದನ್ನೂ ಓದಿ: ಜಿಯೋ ಮಾರ್ಟ್ ಗೋಡೌನ್ನಲ್ಲಿ ಅಗ್ನಿ ಅವಘಡ – ಬೃಹತ್ ಕಟ್ಟಡ, ಕೊಟ್ಯಂತರ ರೂ. ಮೌಲ್ಯದ ವಸ್ತುಗಳು ಭಸ್ಮ
ಯುದ್ಧ ಪ್ರಾರಂಭವಾದ ನಂತರ JNPA ತಲುಪಿದ ಮೊದಲ ಹಡಗು ಇದಾಗಿದೆ. ಹಡಗು ಮತ್ತು ಅದರ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಹಡಗು 15,400 ಟನ್ ಎಲ್ಪಿಜಿಯನ್ನು ತಂದಿದೆ ಎಂದು ತಿಳಿಸಿದೆ.

