ಬೆಂಗಳೂರು: ಬಿಜೆಪಿ ವಿರೋಧದ ನಡುವೆಯೇ ಗ್ರೇಟರ್ ಬೆಂಗಳೂರು ವಿಧೇಯಕ ಸಂಬಂಧಿಸಿದಂತೆ ಜಂಟಿ ಸದನ ಸಮಿತಿ ವರದಿ ಸಲ್ಲಿಕೆಯಾಗಿದೆ. ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯ ವಿಧಾನಮಂಡಲ ಜಂಟಿ ಸದನ ಸಮಿತಿಯ ಸ್ಪೀಕರ್ ಯು.ಟಿ ಖಾದರ್ (UT Khadar) ಅವರಿಗೆ ವರದಿ ಸಲ್ಲಿಕೆ ಮಾಡಿದರು. ಸಮಿತಿ ಕೆಲವೊಂದು ಮಹತ್ವದ ಶಿಫಾರಸು ಮಾಡಿದೆ.
ವರದಿ ಸ್ವೀಕರಿಸಿ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ಗ್ರೇಟರ್ ಬೆಂಗಳೂರು ಮಸೂದೆ ವಿಧಾನಸಭೆಯಲ್ಲಿ ಜುಲೈನಲ್ಲಿ ಮಂಡನೆ ಮಾಡಿದ ಬಳಿಕ ಸದನದಲ್ಲಿ ಚರ್ಚೆ ಆಗಿತ್ತು. ಸಾಧಕ-ಬಾಧಕಗಳ ಚರ್ಚೆ ಉದ್ದೇಶದಿಂದ ಜಂಟಿ ಸದನ ಸಮಿತಿ ರಚನೆ ಮಾಡಲಾಗಿತ್ತು. ಇದೀಗ ಸಮಿತಿ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ವರದಿ ಮಂಡಿಸಲಾಗುವುದು ಎಂದರು.ಇದನ್ನೂ ಓದಿ: ದಲಿತ ಸಿಎಂ ಆಗಲೇಬೇಕು – ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹ
Advertisement
ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಮಾತಾಡಿ, ಐದು ತಿಂಗಳಲ್ಲಿ ಈ ಮಸೂದೆ ಸಂಬಂಧ ಸಭೆ ನಡೆಸಿದ್ದೇವೆ. ಕಾನೂನು ತಜ್ಞರ ಜೊತೆ ಸಭೆ ಮಾಡಿದ್ದೇವೆ. ಸಾರ್ವಜನಿಕರು, ಸಂಘಟನೆಗಳಿಂದ, ತಜ್ಞರಿಂದ ಸಲಹೆ ಪಡೆದು ವರದಿ ಸಿದ್ಧ ಮಾಡಲಾಗಿದೆ. ಮುಂದಿನ ಅಧಿವೇಶನದಲ್ಲಿ ವರದಿ ಮಂಡನೆ ಆಗಲಿದೆ ಎಂದು ತಿಳಿಸಿದರು.
Advertisement
Advertisement
ಗ್ರೇಟರ್ ಬೆಂಗಳೂರು ಸಮಿತಿ ವರದಿ ಪ್ರಮುಖಾಂಶಗಳು:
> ಬಿಬಿಎಂಪಿ ಬದಲಾಗಿ ಗರಿಷ್ಠ 7 ನಗರ ಪಾಲಿಕೆಗಳನ್ನ ರಚನೆ ಮಾಡಲು ಶಿಫಾರಸು ಮಾಡಲಾಗಿದೆ. ಈಗಲೇ 7 ಪಾಲಿಕೆ ಮಾಡಬೇಕು ಅಂತ ಇಲ್ಲ. ಎಷ್ಟು ಪಾಲಿಕೆ ಮಾಡಬೇಕು ಅಂತ ಸರ್ಕಾರ ತೀರ್ಮಾನ ಮಾಡಲಿ ಎಂದು ಸಮಿತಿ ಹೇಳಿದೆ.
Advertisement
> BMRCL, BWSSB ಸೇರಿ ಒಂದು ಏಜೆನ್ಸಿಯಿಂದ ಇನ್ನೊಂದು ಏಜೆನ್ಸಿ ಜೊತೆ ಹೊಂದಾಣಿಕೆ ಇಲ್ಲ. ಹೀಗಾಗಿ ಇವೆಲ್ಲ ಹೊಂದಾಣಿಕೆಯಿAದ ಕೆಲಸ ಮಾಡಲು, ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡಲು ಸಲಹೆ ನೀಡಲಾಗಿದೆ.
> ಗ್ರೇಟರ್ ಬೆಂಗಳೂರು ಅಥಾರಿಟಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರು, ಬೆಂಗಳೂರು ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ.
> ಪ್ರತಿ ಕಾರ್ಪೋರೇಷನ್ ಇಂಟ್ರನಲ್ ಆಡಿಟ್ ಮಾಡಲು ಸಲಹೆ. ಭ್ರಷ್ಟಾಚಾರ ಕಡಿವಾಣಕ್ಕೆ ವಿಜಿಲಿನ್ಸ್ ಸ್ಥಾಪನೆಗೆ ಸಲಹೆ.
> ಮೇಯರ್ ಅವಧಿ 30 ತಿಂಗಳು ಅಂದರೆ 2.5 ವರ್ಷ ಅವಧಿ ಇರಬೇಕು ಅಂತ ವರದಿ ಹೇಳಿದೆ. ಆದಾಯ, ಜನಸಂಖ್ಯೆ ಅನುಗುಣವಾಗಿ ಕಾರ್ಪೋರೇಷನ್‌ಗಳನ್ನ ವಿಂಗಡಣೆ ಮಾಡಬೇಕು.
> ವಿಂಗಡಣೆ ಮಾಡಿದ ಕಾರ್ಪೋರೇಷನ್‌ಗೆ ಹಣ ಕಡಿಮೆ ಆದರೆ ಸರ್ಕಾರವೇ ನೀಡಬೇಕು. ಪ್ರತಿ ಕಾರ್ಪೋರೇಷನ್‌ಗೆ ಬೆಂಗಳೂರು ನಾರ್ಥ್, ಈಸ್ಟ್, ವೆಸ್ಟ್, ಸೌಥ್ ಅಂತಾನೇ ಹೆಸರು ಇಡಬೇಕು.
> ಹೊಸ ಕಾರ್ಪೋರೇಷನ್‌ಗಳಿಗೆ ಬೇರೆ ಜಿಲ್ಲೆ ಸೇರಿಸೋದಿಲ್ಲ. ಕೆಎಂಸಿ ಆಕ್ಟ್ನಲ್ಲಿ ಇರುವ ನಿಯಮದಲ್ಲಿ ಕಾರ್ಪೋರೇಷನ್‌ಗಳು ನಿರ್ಮಾಣ ಆಗಲಿದೆ.
> ಪಾಲಿಕೆ ಜೋಡಿಸಿದಂತೆ ಅಭಿವೃದ್ಧಿ ಆಗಿರುವ ಗ್ರಾಮ ಪಂಚಾಯತಿಗಳನ್ನ ಕಾರ್ಪೋರೇಷನ್‌ಗೆ ಸೇರ್ಪಡೆ ಮಾಡಿಕೊಳ್ಳಬಹುದು.
> ಜನಸಂಖ್ಯೆ ಮತ್ತು ಆದಾಯವನ್ನು ಇಟ್ಟುಕೊಂಡು ಕಾರ್ಪೋರೇಷನ್ ವಿಂಗಡಣೆ ಮಾಡಲು ಸಲಹೆ.
> ಗ್ರೇಟರ್ ಬೆಂಗಳೂರು ಅಥಾರಿಟಿ ಪ್ರತಿ 3 ತಿಂಗಳಿಗೊಮ್ಮೆ ಸಭೆ ಕಡ್ಡಾಯವಾಗಿ ಮಾಡಬೇಕು.
> ಎಕ್ಸಿಕ್ಯುಟಿವ್ ಕಮಿಟಿಯೂ ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ಸೇರಬೇಕು ಅಂತ ಸಲಹೆ ನೀಡಬೇಕು.ಇದನ್ನೂ ಓದಿ: ಬೆಂಗಳೂರಿನಲ್ಲಿ 12 ಎಕ್ರೆ ಜಾಗ ಗುತ್ತಿಗೆ, 29 ವರ್ಷಗಳಿಂದ ಕೋಟ್ಯಂತರ ಲಾಭ – ರಾಹುಲ್ ಆಪ್ತ ಪಿತ್ರೋಡಾ ವಿರುದ್ಧ ಬೃಹತ್ ಭೂ ಹಗರಣ ಆರೋಪ