ಬೆಂಗಳೂರು: ಇಂದಿನಿಂದ (ಸೆ.1) ಗ್ರೇಟರ್ ಬೆಂಗಳೂರು ಆಡಳಿತ (Greater Bengaluru Authority) ಜಾರಿಯಾಗಿದ್ದು, ಬೆಂಗಳೂರನ್ನು ಐದು ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ನಡೆಸಲಾಗುತ್ತದೆ.
ಹೌದು, ಸಿಲಿಕಾನ್ ಸಿಟಿ (Silicon City) ಬೆಳೆಯುತ್ತಿರುವ ನಗರ. ಹೀಗಾಗಿ ಒಂದೇ ಸಂಸ್ಥೆಯಿಂದ ನಿರ್ವಹಣೆ ಕಷ್ಟ ಅಂತಾ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ ಐದು ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ನಡೆಸೋದಕ್ಕೆ ಆದೇಶಿಸಿತ್ತು. ಅದರಂತೆ ಇಂದಿನಿಂದ (ಸೆ.2) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಜಾರಿ ಆಗಿದೆ. ಈ ಹಿಂದೆ ಬಿಬಿಎಂಪಿ ಇತ್ತು, ಆದರೆ ಇನ್ಮುಂದೆ ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಲ್ಲಿರಲಿದೆ. ಈಗಾಗಲೇ ಐದು ಪಾಲಿಕೆಗಳಿಗೆ 10 ಕಚೇರಿಯನ್ನ ಗುರುತು ಮಾಡಲಾಗಿದೆ.ಇದನ್ನೂ ಓದಿ: ಹಾಸನ | ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದ ಪಾಲಿಕೆಯ ಶೆಡ್ ಕುಸಿತ – ಕಾರ್ಮಿಕರು ಪಾರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು ಇತಿಹಾಸ ಪುಟ ಸೇರಲಿದೆ. 1949ರಲ್ಲಿ ಬೆಂಗಳೂರಿನಲ್ಲಿ ನಗರ ಸಭೆ ರೂಪುಗೊಂಡಿತ್ತು. ಆರ್.ಸುಬ್ಬಣ್ಣ ಮೊದಲ ಮೇಯರ್ ಆಗಿದ್ದರು. ಅಂದಿನಿಂದ 1995ರವರೆಗೆ ನಗರಸಭೆ ಆಡಳಿತ ಜಾರಿಯಲ್ಲಿತ್ತು. ನಂತರ 1996ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿ 2006ರವರೆಗೆ ಆಡಳಿತ ನಡೆಸಿತ್ತು. ಬಳಿಕ ವ್ಯಾಪ್ತಿಯನ್ನು ಹಿರಿದಾಗಿಸಿ 2010ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿತ್ತು. ಅಂದಿನಿಂದ 2025ರವರೆಗೆ ಬಿಬಿಎಂಪಿ (BBMP) ಆಡಳಿತ ನಡೆಸಿಕೊಂಡು ಬಂದಿದೆ. 2019-20ರಲ್ಲಿ ಮೇಯರ್ ಆದ ಎಂ.ಗೌತಮ್ ಕುಮಾರ್ ಬೆಂಗಳೂರಿನ ಏಕೀಕೃತ ಆಡಳಿತದ ಕೊನೆಯ ಮೇಯರ್ ಆಗಿದ್ದರು. ಇದೀಗ ಮಹಾನಗರ ಪಾಲಿಕೆಯನ್ನು 5 ನಗರಪಾಲಿಕೆಗಳನ್ನು ವಿಂಗಡಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಆರಂಭವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಎಲ್ಲಾ ನಾಮಫಲಕಗಳು ಇಂದೇ ಬದಲಾಗಲಿದ್ದು, ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿಯಮ ರೂಪಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ ಐದು ಪಾಲಿಕೆಗಳಿಗೆ ಎರಡೆರಡು ಕಚೇರಿಗಳನ್ನ ಗುರುತು ಮಾಡಲಾಗಿದೆ.
1. ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಕಾರ್ಪೋರೇಷನ್ ಸರ್ಕಲ್ ಕೇಂದ್ರ ಕಚೇರಿ ಮುಖ್ಯ ಕಟ್ಟಡ ಅನೆಕ್ಸ್ 1 – ಅನೆಕ್ಸ್ – 2
2. ಬೆಂಗಳೂರು ನಗರ ಕೇಂದ್ರ ನಗರ ಪಾಲಿಕೆ: ಹಾಲಿ ಪೂರ್ವ ವಲಯ ಕಚೇರಿ, ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡ
3. ಬೆಂಗಳೂರು ಪೂರ್ವ ನಗರ ಪಾಲಿಕೆ: ಮಹಾದೇವಪುರ ವಲಯ ಕಚೇರಿ, ಕೆ.ಆರ್ ಪುರಂ ಕಚೇರಿ
4. ಪಶ್ಚಿಮ ವಲಯ: ಆರ್.ಆರ್ ನಗರ ವಲಯ ಕಚೇರಿ, ಹಾಲಿ ಪಾಲಿಕೆ ಸೌಧ ಚಂದ್ರಲೇಔಟ್
5. ಬೆಂಗಳೂರು ಉತ್ತರ ನಗರ ಪಾಲಿಕೆ: ಹಾಲಿ ಯಲಹಂಕ ವಲಯ ಕಚೇರಿ, ಹಾಲಿ ದಾಸರಹಳ್ಳಿ ವಲಯ ಕಚೇರಿ
6. ಬೆಂಗಳೂರು ದಕ್ಷಿಣ ನಗರ ಪಾಲಿಕೆ: ಹಾಲಿ ದಕ್ಷಿಣ ವಲಯ ಕಚೇರಿ, ಹಾಲಿ ಬೊಮ್ಮನಹಳ್ಳಿ ವಲಯ ಕಚೇರಿ
ಇನ್ನೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 15 ಐಎಎಸ್, 20ಕ್ಕೂ ಹೆಚ್ಚು ಕೆಎಎಸ್ ಮತ್ತು ಇಬ್ಬರು ಐಪಿಎಸ್ ಅಧಿಕಾರಗಳ ಹುದ್ದೆಯನ್ನ ರಚನೆ ಮಾಡಲಾಗಿದೆ ಹಾಗೂ ಐದು ಪಾಲಿಕೆಗಳಿಗೆ 28 ವಿಧಾನಸಭಾ ಕ್ಷೇತ್ರಗಳನ್ನ ಹಂಚಿಕೆ ಮಾಡಲಾಗಿದೆ.ಇದನ್ನೂ ಓದಿ: ಟಿ20 ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಮಿಚೆಲ್ ಸ್ಟಾರ್ಕ್
ಯಾವ್ಯಾವ ಪಾಲಿಕೆಗೆ ಎಷ್ಟೆಷ್ಟು ವಿಧಾನಸಭಾ ಕ್ಷೇತ್ರ?
1. ಬೆಂಗಳೂರು ಪಶ್ಚಿಮ ನಗರ ಪಾಲಿಕೆ – 10 ವಿಧಾನಸಭಾ ಕ್ಷೇತ್ರ
2. ಬೆಂಗಳೂರು ಕೇಂದ್ರ ನಗರ ಪಾಲಿಕೆ – 07 ವಿಧಾನಸಭಾ ಕ್ಷೇತ್ರ
3. ಬೆಂಗಳೂರು ಪೂರ್ವ ನಗರ ಪಾಲಿಕೆ – _02 ವಿಧಾನಸಭಾ ಕ್ಷೇತ್ರ
4.ಬೆಂಗಳೂರು ಉತ್ತರ ನಗರ ಪಾಲಿಕೆ – 07 ವಿಧಾನಸಭಾ ಕ್ಷೇತ್ರ
5. ಬೆಂಗಳೂರು ದಕ್ಷಿಣ ನಗರ ಪಾಲಿಕೆ – 08 ವಿಧಾನಸಭಾ ಕ್ಷೇತ್ರ
ಇನ್ನೂ ಗ್ರೇಟರ್ ಬೆಂಗಳೂರು ಎಂಬುದು ಆಂಗ್ಲ ಪದ ಕನ್ನಡ ಪದ ಇಲ್ಲವಾ ಎಂಬ ಪ್ರಶ್ನೆ ಎದ್ದಿತ್ತು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸದನದಲ್ಲಿಯೇ ಡಿಕೆ ಶಿವಕುಮಾರ್ ಅವರನ್ನ ಪ್ರಶ್ನೆ ಮಾಡಿದ್ದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬದಲು ಬೃಹತ್ ಬೆಂಗಳೂರು ಪ್ರಾಧಿಕಾರ ಮಾಡಿ ಅಂತಾ ಒತ್ತಾಯ ಎದ್ದಿದೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೆಸರು ಬದಲಾವಣೆ ವಿಚಾರವನ್ನ ಪ್ರಾಧಿಕಾರದ ಸಮಿತಿ ಗಮನಕ್ಕೆ ತರಲು ಮುಂದಾಗಿದ್ದಾರೆ.ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ಅಪಘಾತ – ಕೋಲಾರ ಮೂಲದ ಬಾಡಿ ಬಿಲ್ಡರ್ ದುರ್ಮರಣ