ಹೊಸ ವರ್ಷದ ಮೊದಲ ರಾತ್ರಿ ದೇಶಾದ್ಯಂತ ಹೆಚ್ಚು ಸೇಲ್‌ ಆಗಿದ್ದು ಯಾವ ಫ್ಲೇವರ್‌ ಕಾಂಡೋಮ್‌?

Public TV
2 Min Read
condoms 2

ನವದೆಹಲಿ: 2025ರ ಹೊಸ ವರ್ಷವನ್ನು (New Year 2025) ಇಡೀ ದೇಶವೇ ಅದ್ಧೂರಿಯಾಗಿ ಸ್ವಾಗತಿಸಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ಉತ್ಪನ್ನಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. ಈ ಬಾರಿ ಮದ್ಯ ಹೊರತುಪಡಿಸಿ ದ್ರಾಕ್ಷಿ, ಆಲೂ ಭುಜಿಯಾ (Aloo Bhujia) (ಆಲೂಗೆಡ್ಡೆಯಿಂದ ತಯಾರಾದ ಕರಿದ ಪದಾರ್ಥ) ಹಾಗೂ ಬಗೆ ಬಗೆ ಫ್ಲೇವರ್‌ಗಳ ಕಾಂಡೋಮ್‌ಗಳು ಅತಿಹೆಚ್ಚು ಖರೀದಿಯಾಗಿವೆ ಎಂದು ವರದಿಗಳು ತಿಳಿಸಿವೆ.

ಇದು 2025ರ ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ವಾಣಿಜ್ಯ ಉದ್ಯಮಗಳಿಗೆ ಬೂಸ್ಟ್‌ ಸಿಕ್ಕಂತಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಯಾವೆಲ್ಲ ಫ್ಲೆವರ್‌ನ ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಿದ್ದಾರೆ ಅನ್ನೋದರ ಕುರಿತು ಬ್ಲಿಂಕಿಟ್‌ ಹಾಗೂ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗಳು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿವೆ. ಇದನ್ನೂ ಓದಿ: ನ್ಯೂ ಇಯರ್‌ ‘ಕಿಕ್‌’ – ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 308 ಕೋಟಿ ರೂ. ಮದ್ಯ ಸೇಲ್

ಚಾಕೊಲೇಟ್‌ ಫ್ಲೇವರ್‌ ಭರ್ಜರಿ ಸೇಲ್‌:
2025ರ ಹೊಸ ವರ್ಷದ ಮೊದಲ ರಾತ್ರಿ ವಿವಿಧ ಫ್ಲೇವರ್‌ ಕಾಂಡೋಮ್‌ಗಳು (Condoms) ದೇಶಾದ್ಯಂತ ಸೇಲ್‌ ಆಗಿವೆ. ಚಾಕೊಲೇಟ್‌ ಫ್ಲೇವರ್‌ಗಳು 39.1%, ಸ್ಟ್ರಾಬೆರಿ 31.0%, ಬಬಲ್‌ಗಮ್‌ ಫ್ಲೇವರ್‌ 19.8%, ಇತರೇ ಫ್ಲೇವರ್‌ಗಳು 10.1% ಕಾಂಡೋಮ್‌ಗಳು ಸೇಲ್‌ ಆಗಿವೆ.

condoms

ಅಲ್ಲದೇ ಇತರೇ ಉತ್ಪನ್ನಗಳ ಪೈಕಿ ಆಲೂ ಭುಜಿಯ 2,34,512 ಪ್ಯಾಕೆಟ್‌ಗಳು, 45,531 ಟಾನಿಕ್ ವಾಟರ್‌ ಕ್ಯಾನ್‌, 6,834 ಪ್ಯಾಕೆಟ್‌ಗಳ ಐಸ್ ಕ್ಯೂಬ್‌ಗಳು, 1,003 ಲಿಪ್‌ಸ್ಟಿಕ್‌ಗಳು, 762 ಲೈಟರ್‌ಗಳು ದೇಶದ ಪ್ರಮುಖ ನಗರಗಳಲ್ಲಿ ಸೇಲ್‌ ಆಗಿವೆ. ಇದನ್ನೂ ಓದಿ: ಯುಎಇ ವಿಮಾನ ಅಪಘಾತದಲ್ಲಿ ಪೈಲಟ್‌ ಜೊತೆ ಭಾರತೀಯ ಮೂಲದ ವೈದ್ಯ ಸಾವು

ಮೊದಲೆಲ್ಲ ಸ್ವಿಗ್ಗಿ, ಝೊಮೆಟೋ ಇಂತಹವುಗಳನ್ನ ಬರೀ ಫುಡ್‌, ಕೆಲವು ವಸ್ತುಗಳನ್ನು ಆರ್ಡರ್‌ ಮಾಡಲು ಮಾತ್ರ ಬಳಕೆ ಮಾಡುತ್ತಿದ್ದರು. ಆದರೆ ಇದೀಗ ಇವುಗಳಲ್ಲೇ ಅತೀ ಹೆಚ್ಚು ಕಾಂಡೋಮ್‌ಗಳನ್ನು ಆರ್ಡರ್ ಮಾಡುತ್ತಿದ್ದಾರೆ. ಪ್ರತೀ ಬಾರಿಯಂತೆ ಭಾರತವು 2025ರ ಹೊಸ ವರ್ಷದ ಮೊದಲ ರಾತ್ರಿ ಕೆಲವು ತ್ವರಿತ ಡೆಲಿವರಿ ದಾಖಲೆಗಳನ್ನು ಮುರಿಯುವ ಮೂಲಕ ಹೊಸ ದಾಖಲೆ ಬರೆದಿದೆ. ಇದನ್ನೂ ಓದಿ: ಮುಂಬೈ | 232 ಕೆಜಿ ಮಾದಕ ವಸ್ತು ಕಳ್ಳಸಾಗಾಣಿಕೆ ಕೇಸ್‌ – 8 ಪಾಕ್‌ ಪ್ರಜೆಗಳಿಗೆ 20 ವರ್ಷ ಜೈಲು

Share This Article