ಬೆಂಗಳೂರು: ಶಿಕ್ಷಣ ಇಲಾಖೆಯಿಂದ ಎಡವಟ್ಟಿನ ಆದೇಶವೊಂದು ಹೊರಬಿದ್ದಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡದ ಶಾಲೆಗಳ ಅನುದಾನ ಕಟ್ ಮಾಡುವಂತೆ ಆದೇಶಿಸಿದೆ.
ಅನುದಾನಿತ ಶಾಲೆಗಳ ಅನುದಾನ ತಡೆ ಹಿಡಿಯುವಂತೆ ಸರ್ಕಾರ ಆದೇಶ ನೀಡಿದೆ. 5 ವರ್ಷದ ಸರಾಸರಿ ಫಲಿತಾಂಶದಲ್ಲಿ ಒಂದು ಪರ್ಸೆಂಟ್ ಕಡಿಮೆ ಬಂದ್ರೂ ಅನುದಾನ ಕಟ್ ಮಾಡಬೇಕು ಅಂತ ಹೇಳೋ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜಿನೀಶ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
Advertisement
ಈ ಮೂಲಕ ಅನುದಾನಿತ ಶಾಲೆಗಳ ಮೇಲೆ ಸರ್ಕಾರ ಗಧಾ ಪ್ರಹಾರ ಮಾಡಿದೆ. ಆದ್ರೆ ಈ ನಿಯಮ ಸರ್ಕಾರಿ ಶಾಲೆಗಳಿಗೆ ಅನ್ವಯವಾಗದೆ, ಕೇವಲ ಅನುದಾನಿತ ಶಾಲೆಗಳಿಗೆ ಮಾತ್ರ ನಿಯಮ ಅನ್ವಯವಾಗಲಿದೆ ಅಂತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ.
Advertisement
ಅನುದಾನ ನೀಡದಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಆದೇಶ ನೀಡಿರುವುದು ಇದೀಗ ಸರ್ಕಾರಿ ಶಾಲೆಗಳಿಗೊಂದು ನ್ಯಾಯ, ಅನುದಾನಿತ ಶಾಲೆಗಳಿಗೊಂದು ನ್ಯಾಯ ಅನ್ನೋ ಪ್ರಶ್ನೆ ಮೂಡುವಂತೆ ಮಾಡಿದೆ.