ತಿರುವನಂತಪುರಂ: ಏಷ್ಯಾದ ಅತ್ಯಂತ ಹಿರಿಯ ಸಾಕಾನೆ ಎಂಬ ದಾಖಲೆ ಬರೆದಿದ್ದ ದಾಕ್ಷಾಯಿಣಿ ಆನೆ ತನ್ನ 88 ವರ್ಷದಲ್ಲಿ ಕೊನೆಯುಸಿರೆಳೆದಿದ್ದೆ.
ಕೇರಳ ಪಪ್ಪನಮ್ ಕೋಡೆ ಕೇಂದ್ರದಲ್ಲಿದ್ದ ದಾಕ್ಷಾಯಿಣಿ ತನ್ನ 2016ರಲ್ಲಿ ಗಿನ್ನಿಸ್ ದಾಖಲೆಯನ್ನು ಬರೆದಿತ್ತು. ಆದರೆ ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಸಾವನ್ನಪ್ಪಿದೆ.
Advertisement
2016ರಲ್ಲಿ ದಾಕ್ಷಾಯಿಣಿ ಆನೆಗೆ `ಅಜ್ಜಿ’ ಎಂಬ ಬಿರುದು ನೀಡಲಾಗಿತ್ತು. ಈ ಮೂಲಕ ಗಿನ್ನಿಸ್ ಬುಕ್‍ನಲ್ಲಿ ಸ್ಥಾನ ಪಡೆದಿತ್ತು. ಅಲ್ಲದೆ ಅಂಚೆ ಇಲಾಖೆ ದಾಕ್ಷಾಯಣಿ ಹೆಸರಿನಲ್ಲಿ ಪೋಸ್ಟಲ್ ಸ್ಟಾಂಪ್ ಕೂಡ ನೀಡಿ ಗೌರವಿಸಿತ್ತು.
Advertisement
Advertisement
ಕೇರಳ ಪದ್ಮನಾಭ ದೇವಾಲಯದಲ್ಲಿ ನಡೆಯುವ ಐತಿಹಾಸಿಕ ‘ಅರಟ್ಟು’ ಮೆರವಣಿಗೆಯಲ್ಲಿ ದಾಕ್ಷಾಯಿಣಿ ಭಾಗವಹಿಸುತ್ತಿತ್ತು. ದಾಕ್ಷಾಯಿಣಿ ತನ್ನ ಸಾಧು ಸ್ವಭಾವದಿಂದ ಎಲ್ಲರ ಮನಗೆದ್ದಿತ್ತು ಎಂದು ಆನೆಯ ನೋಡಿಕೊಳ್ಳುತ್ತಿದ್ದ ಚೆಂಗಲೂರ್ ಮಹಾದೇವ್ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ದಾಕ್ಷಾಯಿಣಿಯನ್ನು ಹೊರತು ಪಡಿಸಿದರೆ ಥೈಲ್ಯಾಂಡ್ ನಲ್ಲಿ 83 ವರ್ಷದ ಆನೆ 2ನೇ ಸ್ಥಾನವನ್ನು ಪಡೆದಿದ್ದು, ಸಾಮಾನ್ಯವಾಗಿ ಆನೆಗಳು ಮನುಷ್ಯನಷ್ಟೇ ಆಯುಷ್ಯವನ್ನು ಹೊಂದಿರುತ್ತವೆ. ಕೆಲ ಗಂಡಾನೆಗಳು 120 ವರ್ಷಗಳು ಬದುಕಬಹುದಾಗಿದ್ದು, ಆದರೆ ಸಾಕಾನೆಗಳಲ್ಲಿ ದಾಕ್ಷಾಯಿಣಿ ಅತಿ ಹೆಚ್ಚು ವರ್ಷ ಬದುಕಿದ ಹೆಗ್ಗಳಿಕೆಯನ್ನು ಪಡೆದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv