ಬೆಂಗಳೂರು: ಗ್ರಾನೈಟ್ ಲಾರಿಯೊಂದು ಓವರ್ ಲೋಡ್ ಆಗಿ ರಸ್ತೆ ಮಧ್ಯೆದಲ್ಲಿಯೇ ಹೂತುಹೋದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
Advertisement
ಈ ಘಟನೆ ಆನೇಕಲ್ -ಬನ್ನೇರುಘಟ್ಟ ಮುಖ್ಯರಸ್ತೆಯ ಬೇಗೆಹಳ್ಳಿ ಬಳಿ ನಡೆದಿದೆ. ನಿರ್ಮಾಣ ಹಂತದ ರಸ್ತೆಯಲ್ಲಿ ಲಾರಿ ಹೂತಿದ್ದು, ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತವೊಂದು ಕೈ ತಪ್ಪಿದೆ.
Advertisement
Advertisement
16 ಟನ್ ಅನುಮತಿ ಇರುವ ಲಾರಿಯಲ್ಲಿ 40 ಟನ್‍ಗೂ ಅಧಿಕವಾಗಿ ಕಲ್ಲುಗಳನ್ನು ತುಂಬಿದ್ದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಲಾರಿ ನಡುರಸ್ತೆಯಲ್ಲಿಯೇ ನಿಂತಿದ್ದರಿಂದ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ಥವಾಗಿದ್ದು, ಸವಾರರು ಪರದಾಡಿದ್ದಾರೆ.
Advertisement