Connect with us

ತಡೆಗೋಡೆಗೆ ಡಿಕ್ಕಿಯಾಗಿ ಮನೆಗೆ ಗುದ್ದಿದ್ದ ಗ್ರಾನೈಟ್ ತುಂಬಿದ್ದ ಲಾರಿ

ತಡೆಗೋಡೆಗೆ ಡಿಕ್ಕಿಯಾಗಿ ಮನೆಗೆ ಗುದ್ದಿದ್ದ ಗ್ರಾನೈಟ್ ತುಂಬಿದ್ದ ಲಾರಿ

ರಾಮನಗರ: ಗ್ರಾನೈಟ್ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿ ಹೊಡೆದಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದಲ್ಲಿ ನಡೆದಿದೆ.

ಸುಮಾರು 3 ಗಂಟೆಗೆ ಕನಕಪುರ ಕಡೆಯಿಂದ ಗ್ರಾನೈಟ್ ಕಲ್ಲು ತುಂಬಿದ್ದ ಲಾರಿ ಹೊರಟಿದೆ. ಅಚ್ಚಲು ಗ್ರಾಮದ ಬಳಿ ಬರುತ್ತಿದ್ದಂತೆಯೇ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಅಡ್ಡಾದಿಡ್ಡಿ ಚಲಿಸಿದೆ. ನಂತರ ರಸ್ತೆ ಪಕ್ಕದ ಗೌರಮ್ಮ ಎಂಬವರ ಮನೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಒಳನುಗ್ಗಿದೆ. ಅಲ್ಲದೇ ಗೌರಮ್ಮ ಅವರ ಮನೆ ಗೋಡೆಗೂ ಕೂಡ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಂತರ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement