ಬೆಂಗಳೂರು: ಯುವಕನೊಬ್ಬ ತನ್ನ ಅಜ್ಜಿಯನ್ನ ಕೊಲೆಗೈದು ಹೆಣವನ್ನ ಕಬೋರ್ಡ್ ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಈಗ ರೋಚಕ ತಿರುವು ಸಿಕ್ಕಿದೆ.
ತಂದುಕೊಟ್ಟ ಊಟ ತಿಂದಿಲ್ಲ ಅಂತ ಮೊಮ್ಮಗ ಅಜ್ಜಿಯನ್ನ ಕೊಂದಿದ್ದ ಎಂಬ ವಿಷಯ ಬಹಿರಂಗವಾಗಿದೆ. ತಂದು ಕೊಟ್ಟ ಊಟ ಬಿಸಾಡಿದಕ್ಕೆ ಮೊಮ್ಮಗ ರಾಡಿನಿಂದ ಹೊಡೆದು ಅಜ್ಜಿಯನ್ನ ಕೊಲೆಗೈದಿದ್ದ. ಏಳು ತಿಂಗಳ ಕಾಲ ಶವ ಇದ್ದ ರೂಂನಲ್ಲೇ ಮಲಗುತ್ತಿದ್ದ. ನಂತರ ವಾಸನೆ ಬಂದಿದ್ದಕ್ಕೆ ಮನೆ ಖಾಲಿ ಮಾಡಿದ್ದ ಎಂದು ತಿಳಿದುಬಂದಿದೆ.
Advertisement
ಆಗಸ್ಟ್ ನಲ್ಲಿ ಅಜ್ಜಿಯನ್ನ ಕೊಲೆ ಮಾಡಿ ಕಬೋರ್ಡ್‍ನಲ್ಲಿ ಇಟ್ಟಿದ್ದ. ಫೆಬ್ರವರಿಯಲ್ಲಿ ವಾಸನೆ ಬಂದ ಬಳಿಕ ಮನೆ ಬಿಡೋ ಚಿಂತನೆ ಮಾಡಿದ್ದ. ಕೊಲೆ ಮಾಡಿದ ಸಂಜಯ್ ಸ್ನೇಹಿತನಿಂದ ಈ ಮಾಹಿತಿ ಬಹಿರಂಗವಾಗಿದೆ. ಸದ್ಯ ಸಂಜಯ್ ಮತ್ತು ಆತನ ತಾಯಿ ಶಶಿಕಲಾಗಾಗಿ ಕೆಂಗೇರಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
Advertisement
Advertisement
ಕೆಂಗೇರಿಯಲ್ಲಿ ನವೀನ್ ಎಂಬವರ ಬಾಡಿಗೆ ಮನೆಯಲ್ಲಿ ಸಂಜಯ್ ವಾಸವಿದ್ದ. ಮನೆಯಲ್ಲಿ ತಾಯಿ, ಮಗ ಹಾಗೂ ಅಜ್ಜಿ ಮೂರು ಜನ ವಾಸವಿದ್ರು. ಆದ್ರೆ ಫೆಬ್ರವರಿಯಲ್ಲಿ ಸಂಜಯ್ ನವೀನ್‍ರಿಂದಲೇ 50 ಸಾವಿರ ರೂ. ಸಾಲ ಪಡೆದು ಊರಿಗೆ ಹೋಗ್ತಿದ್ದೇನೆಂದು ಹೇಳಿ ತನ್ನ ತಾಯಿ ಶಶಿಕಲಾ ಜೊತೆ ತಲೆಮರೆಸಿಕೊಂಡಿದ್ದ. ಪರಾರಿಯಾದ ಬಳಿಕ ಮತ್ತೆ ಮನೆಯ ಕಡೆ ಸಂಜಯ್ ಕುಟುಂಬ ಹಿಂತಿರುಗಿರಲಿಲ್ಲ.
Advertisement
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಮನೆಯ ಅಗ್ರಿಮೆಂಟ್ ಮುಗಿದ ಬಳಿಕ ಮಾಲೀಕ ನವೀನ್ ಮನೆಯೊಳಗೆ ಹೋಗಿದ್ರು. ನಂತರ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ರು. ನಂತರ ಪೊಲೀಸರು ಪರಿಶೀಲನೆ ನಡೆಸಿದಾಗ ರೂಮಿನಲ್ಲಿದ್ದ ಡ್ರಂನ ಒಳಗಿದ್ದ ಮತ್ತೊಂದು ಡ್ರಂನಲ್ಲಿ ರಕ್ತದ ಕಲೆಯ ಬಟ್ಟೆಗಳು ಪತ್ತೆಯಾಗಿತ್ತು. ಕಬೋರ್ಡ್ ಒಳಗಿನ ಕೆಳಗಿನ ಭಾಗದಲ್ಲಿ ಕೊಳೆತ ದೇಹ ಪತ್ತೆಯಾಗಿತ್ತು. ಕಬೋರ್ಡ್ ತೆಗೆದು ನೋಡಿದಾಗ ಶವ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಶವ ಅಜ್ಜಿಯದೇ ಎಂಬುದು ದೃಢವಾಗಿತ್ತು. ಶಿವಮೊಗ್ಗದಲ್ಲಿ ಇರುವ ಅಜ್ಜಿಯ ಸಂಬಂಧಿಕರಿಗೆ ಪೊಲೀಸರು ಈ ಬಗ್ಗೆ ವಿಷಯ ಮುಟ್ಟಿಸಿದ್ರು. ಆದ್ರೆ ಶವ ಸಂಸ್ಕಾರಕ್ಕೂ ಅಜ್ಜಿಯ ಶವ ಬೇಡ ಎಂದು ಸಂಬಂಧಿಕರು ಹೇಳಿದ್ರು.
ಕೊಲೆ ಮಾಡಿದ ಬಳಿಕ ಕಾಲೇಜು, ಕೆಲಸ ಯಾವುದೇ ಪ್ರದೇಶದಲ್ಲೂ ಸಂಜಯ್ ಪತ್ತೆಯಾಗಿಲ್ಲವಾದ್ದರಿಂದ ಸಂಜಯ್‍ನೇ ಕೊಲೆ ಮಾಡಿ ನಾಪತ್ತೆಯಾಗಿರೋದು ದೃಢವಾಗಿತ್ತು. ಓದುತ್ತಿದ್ದ ಕಾಲೇಜಿನಲ್ಲೂ ಸಂಜಯ್ ಎರಡೆರಡು ವಿಳಾಸ ಬದಲು ಮಾಡಿದ್ದ. ಕುಟುಂಬದ ಕಷ್ಟ ಹೇಳಿ ಹಣ ಪಡೆದು ಮೋಸ ಮಾಡೋದು ಇವನ ಖಯಾಲಿಯಾಗಿತ್ತು. ಮನೆಯ ಮಾಲೀಕ ನವೀನ್‍ಗೆ ಐವತ್ತು ಸಾವಿರ ರೂ. ಮೋಸ ಮಾಡಿದ್ದು, ಕೆಲಸ ಮಾಡುವ ಜಾಗದಲ್ಲಿಯೂ ಮೋಸ ಮಾಡಿದ್ದ. ಮನೆಯಲ್ಲಿ ಕಷ್ಟ ಅಂತ ಹೇಳಿ ಗಿರಿನಗರದ ಕೃಷ್ಣಮೂರ್ತಿ ಎಂಬವರಿಂದ ಒಂದೂವರೆ ಲಕ್ಷ ರೂ. ಹಣ ಪಡೆದು ಪರಾರಿಯಾಗಿದಾನೆ. ಕೊಲೆ ಪ್ರಕರಣ ಬೆಳಕಿಗೆ ಬಂದ ಮೇಲೆ ಕೃಷ್ಣಮೂರ್ತಿ ಠಾಣೆಗೆ ಬಂದಾಗ ಸಂಜಯ್‍ನ ಮೋಸ ಬಯಲಾಗಿದೆ.