ಬಾಗಲಕೋಟೆ: ಶಸ್ತ್ರಚಿಕಿತ್ಸೆಗೆ ಬಂದಿದ್ದ ಶತಾಯುಷಿ ಅಜ್ಜಿಯೊಬ್ಬರು (Grandmother) ಗುಣಮುಖರಾಗಿ ಆಸತ್ರೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಘಟನೆ ಬಾಗಲಕೋಟೆಯ (Bagalkote) ಖಾಸಗಿ ಆಸತ್ರೆಯೊಂದರಲ್ಲಿ (Hospital) ನಡೆದಿದೆ.
ಕಾಶಮ್ಮ ಹಿರೇಮಠ (103 ವರ್ಷ) ಎಂಬುವವರು ಧ್ವಜಾರೋಹಣ ನೆರವೇರಿಸಿದ ಶತಾಯುಷಿ. ಅಜ್ಜಿ ಆತ್ಮವಿಶ್ವಾಸದಿಂದ ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದು ವೈದ್ಯ ಲೋಕಕ್ಕೆ ಅಚ್ಚರಿಯಾಗಿದೆ. ಹೀಗಾಗಿ ಚೇತರಿಸಿಕೊಂಡ ಅಜ್ಜಿಯ ನೇತೃತ್ವದಲ್ಲೇ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಧ್ವಜಾರೋಹಣ ನಡೆಸಿದ್ದಾರೆ. ಇದನ್ನೂ ಓದಿ: 77th Independence Day: ಸ್ವಾತಂತ್ರ್ಯ ದಿನ ಅರ್ಥಪೂರ್ಣವಾಗಿ ಆಚರಿಸಿದ ಸ್ಟಾರ್ ಕ್ರಿಕೆಟಿಗರು
Advertisement
Advertisement
ತಳಗಿಹಾಳ ಗ್ರಾಮದ ಕಾಶಮ್ಮ ಅವರು ಕೆಲವು ದಿನಗಳ ಹಿಂದೆ ಆಯತಪ್ಪಿ ಬಿದ್ದು ಎಡಗಾಲು ಮುರಿದು ಹೋಗಿತ್ತು. ಹೀಗಾಗಿ ಅಜ್ಜಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು, ಅಜ್ಜಿ ಶಸ್ತ್ರಚಿಕಿತ್ಸೆಗೆ ಸ್ಪಂದಿಸುತ್ತಾರಾ ಎಂಬ ಅನುಮಾನದಿಂದಲೇ ಚಿಕಿತ್ಸೆ ನೀಡಿದ್ದರು. ಈಗ ವಾಕರ್ ಸಹಾಯದಿಂದ ಅಜ್ಜಿ ನಡೆದಾಡುತ್ತಿದ್ದಾರೆ. ಅಜ್ಜಿಯ ಆತ್ಮವಿಶ್ವಾಸಕ್ಕೆ ಆಸ್ಪತ್ರೆಯ ಸಿಬ್ಬಂದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಮೋದಿ ಭಾಷಣದ ವೇಳೆ ಖಾಲಿ ಕುರ್ಚಿಯಲ್ಲಿ ಸಂದೇಶ – ಏನಿತ್ತು?
Advertisement
Web Stories