ಬೆಳಗಾವಿ: ಸಂಸದೆ ಶೋಭಾ ಕರಂದ್ಲಾಜೆ ಅವರು ನಗರದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ನೋವನ್ನು ಆಲಿಸಿದರು. ಹಾಗೆಯೇ ನಿಮ್ಮ ಬದುಕನ್ನು ಕಟ್ಟಿಕೊಡುವುದು ನಮ್ಮ ಜವಾಬ್ದಾರಿ. ಯಾರು ಹೆದರಬೇಡಿ ಧೈರ್ಯದಿಂದ ಇರಿ ಎಂದು ಭರವಸೆ ನೀಡಿದ್ದಾರೆ.
ಖಾಸಬಾಗದ ಓಂ ನಗರದಲ್ಲಿರುವ ಸಾಯಿ ಹಾಲ್‍ನಲ್ಲಿ ನೂರಾರು ಪ್ರವಾಹಪೀಡಿತರು ಆಶ್ರಯ ಪಡೆದಿದ್ದಾರೆ. ಈ ಕೇಂದ್ರಕ್ಕೆ ಶೋಭಾ ಹಾಗೂ ಸ್ಥಳಿಯ ಶಾಸಕರಾದ ಅನೀಲ ಬೆನಕೆ ಹಾಗೂ ಅಭಯ ಪಾಟೀಲ್ ಭೇಟಿ ನೀಡಿ ಸಂತ್ರಸ್ತರ ಸಮಸ್ಯ ಬಗ್ಗೆ ಆಲಿಸಿದರು. ಆಗ ಲಕ್ಣೀನಗರದ ನಾಗವ್ವಾ ಅವರು ಮಳೆಗೆ ತಮ್ಮ ಮನೆ ಬಿದ್ದು ನಾಶವಾಗಿರುವ ಬಗ್ಗೆ ಮಾಹಿತಿ ನೀಡಿ, ಪರಿಹಾರ ಕೊಡಿಸಿ ಎಂದು ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ.
Advertisement
Advertisement
ನಿರಾಶ್ರಿತರಿಗೆ ಧೈರ್ಯ ತುಂಬಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಯಾರು ಕೂಡ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಬದುಕನ್ನು ಕಟ್ಟಿಕೊಡುವ ಜವಾಬ್ದಾರಿ ನಮ್ಮದು ಎಂದು ಸಂತ್ರಸ್ತರಿಗೆ ಸಂಸದೆ ಭರವಸೆ ಕೊಟ್ಟಿದ್ದಾರೆ.
Advertisement
ಇಂದು ಧಾರವಾಡದಲ್ಲಿ ಮನೆ ಕಳೆದುಕೊಂಡವರಿಗೆ ನಾನೇ ಸ್ವತಃ ಸ್ಥಳಕ್ಕೆ ಭೇಟಿ ಕೊಟ್ಟು ಸರ್ಕಾರದ ವತಿಯಿಂದ ಪರಿಹಾರದ ಮೊದಲ ಕಂತಿನ 94 ಸಾವಿರ ಹಣ ವಿತರಿಸಿ ಬಂದಿದ್ದೇನೆ. ಅಲ್ಲದೆ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಬಸವ ವಸತಿ ಯೋಜನೆಯಡಿ ಹೊಸ ಮನೆ ನಿರ್ಮಿಸಿಕೊಡಲಾಗುವುದು. ಮಂಗಳವಾರದಿಂದಲೇ ಪರಿಹಾರ ಚೆಕ್ ವಿತರಣೆ ಮಾಡಲಾಗುತ್ತದೆ ಧೈರ್ಯದಿಂದ ಇರಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿಮ್ಮ ಜೊತೆ ಇದೆ ಎಂದು ಹೇಳಿದ್ದಾರೆ.