Mysuru | ನೀರಿನಲ್ಲಿ ಮುಳುಗಿ ತಾತ, ಇಬ್ಬರು ಮೊಮ್ಮಕ್ಕಳು ಜಲಸಮಾಧಿ

Public TV
1 Min Read
Mysuru T Narasipura Drown in Water

ಮೈಸೂರು: ನೀರಿನಲ್ಲಿ ಮುಳುಗಿ ತಾತ (Grandfather) ಹಾಗೂ ಇಬ್ಬರು ಮೊಮ್ಮಕ್ಕಳು (Grandchildren) ಜಲಸಮಾಧಿಯಾದ ಘಟನೆ ಮೈಸೂರು (Mysuru) ಜಿಲ್ಲೆ ಟಿ.ನರಸಿಪುರ (T Narasipura) ತಾಲೂಕಿನಲ್ಲಿ ನಡೆದಿದೆ.

ಚೌಡಯ್ಯ (70), ಭರತ್ (13), ಧನುಷ್ (10) ಮೃತ ದುರ್ದೈವಿಗಳು. ಮೃತರು ಟಿ.ನರಸೀಪುರ ಪಟ್ಟಣದ ತಿರುಮಕೂಡಲಿನ ನಿವಾಸಿಗಳಾಗಿದ್ದು, ಕಾವೇರಿ ನದಿ ಬಳಿಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಇದನ್ನೂ ಓದಿ: ಜಮೀರ್ ಕಣ್ಣೀರು ಮತ್ತು 100 ಬಿರಿಯಾನಿ..!

ಇಬ್ಬರು ಮೊಮ್ಮಕ್ಕಳು ನೀರಿನಲ್ಲಿ ಮುಳುಗಿದ್ದ ಹಿನ್ನೆಲೆ ತಾತ ಮಕ್ಕಳ ರಕ್ಷಣೆಗೆಂದು ತಾವೂ ನೀರಿಗಿಳಿದಿದ್ದರು. ಈ ವೇಳೆ ಇಬ್ಬರು ಮೊಮ್ಮಕ್ಕಳನ್ನು ರಕ್ಷಿಸಲಾಗದೇ ಚೌಡಯ್ಯ ಕೂಡ ಸಾವನ್ನಪ್ಪಿದ್ದಾರೆ. ಮೂವರ ಮೃತದೇಹಗಳನ್ನು ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ಮುಂದೆ ಕಸಕ್ಕೂ ಶುಲ್ಕ – ತಿಂಗಳಿಗೆ ವಸತಿ, ವಾಣಿಜ್ಯ ಕಟ್ಟಡಗಳಿಗೆ ಎಷ್ಟು?

Share This Article