– ಹೆಣ್ಣುಮಕ್ಕಳಿಂದಲೇ ನೊಗಕ್ಕೆ ಹೆಗಲು ಕೊಟ್ಟು ಉಳುಮೆ
ಮಂಡ್ಯ: ಅಜ್ಜನಿಗೆ ಎತ್ತುಗೊಳ್ಳನ್ನು ಕೊಳ್ಳಲು ಕಷ್ಟವಾಗಿರುವ ಕಾರಣ ಇಬ್ಬರು ಮೊಮ್ಮಕ್ಕಳು ನೊಗಕ್ಕೆ ಹೆಗಲು ಕೊಟ್ಟು ವ್ಯವಸಾಯ ಮಾಡುತ್ತಿರುವ ಮನಕಲಕುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬಳಘಟ್ಟ ಗ್ರಾಮದಲ್ಲಿ ನಡೆದಿದೆ.
Advertisement
ಬಳಘಟ್ಟ ಗ್ರಾಮದ ರೈತ ಸಣ್ಣಸ್ವಾಮಿ ಅವರಿಗೆ 1.5 ಎಕರೆ ಜಮೀನು ಇದ್ದು, ಬೇಸಾಯ ಮಾಡಲು ಇವರ ಬಳಿ ಎತ್ತುಗಳಿಲ್ಲ. ಕೂಲಿ ಕೊಟ್ಟು ಉಳುಮೆ ಮಾಡಿಸಲು ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಹೀಗಾಗಿ ಸಣ್ಣಸ್ವಾಮಿ ಅವರಿಗೆ ಅವರ ಮೊಕ್ಕಳಾದ ವರ್ಷಿತಾ, ಅಂಕಿತ ಹೆಗಲು ಕೊಟ್ಟಿದ್ದಾರೆ. ಇದನ್ನೂ ಓದಿ: ವಿದ್ಯಾಪೀಠಕ್ಕೆ ಬನ್ನಿ – ಕಾಲೇಜ್, ಕೋರ್ಸ್‌ಗಳ ಬಗ್ಗೆ ಉಚಿತವಾಗಿ ಮಾಹಿತಿ ಪಡೆದುಕೊಳ್ಳಿ
Advertisement
Advertisement
ಎತ್ತುಗಳ ರೀತಿ ನೊಗ ಹೊತ್ತು, ಇಬ್ಬರು ಹೆಣ್ಣು ಮಕ್ಕಳು ಹೊಲದಲ್ಲಿ ನೆಟ್ಟಿರುವ ರಾಗಿಗೆ ಉಳಿಮೆ ಮಾಡಲು ಸಹಾಯಕರಾಗಿದ್ದಾರೆ. ಕಾಲೇಜಿಗೆ ಹೋಗುವ ಈ ಇಬ್ಬರು ಹೆಣ್ಣು ಮಕ್ಕಳು, ಬಿಡುವಿನ ವೇಳೆ ಜಮೀನಿಗೆ ಬಂದು ಅಜ್ಜನ ಜೊತೆ ಇದೇ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ನಮ್ಮ ಬಳಿ ಎತ್ತುಗಳಿಲ್ಲ, ಅದಕ್ಕಾಗಿ ಈ ಪರಿಸ್ಥಿತಿ ಬಂದಿದೆ. ಕೂಲಿ ಕೊಟ್ಟು ವ್ಯವಸಾಯ ಮಾಡುವಷ್ಟು ಶಕ್ತಿ ನಮಗೆ ಇಲ್ಲ. ಯಾರಾದರೂ ಎತ್ತುಗಳನ್ನು ಕೊಡಿಸಿದರೆ ಸಹಾಯವಾಗುತ್ತದೆ ಎನ್ನುತ್ತಾರೆ ಅಜ್ಜ ಹಾಗೂ ಮೊಮ್ಮಕ್ಕಳು.