DavanagereDistrictsKarnatakaLatest

ಆಧಾರ್ ಕಾರ್ಡ್ ನೆಪದಲ್ಲಿ ಆಸ್ತಿ ಲಪಟಾಯಿಸಿ ಬೀದಿಗೆ ತಳ್ಳಿದ ಮೊಮ್ಮಗಳು!

ದಾವಣಗೆರೆ: ಮೊಮ್ಮಗಳೊಬ್ಬಳು ಆಧಾರ್ ಕಾರ್ಡ್ ಮಾಡಿಸುವ ನೆಪದಲ್ಲಿ ಆಸ್ತಿ ಲಪಟಾಯಿಸಿ ವೃದ್ಧೆಯನ್ನು ಹೊರ ಹಾಕಿರುವ ಅಮಾನವೀಯ ಘಟನೆ ದಾವಣಗೆರೆಯ ಕೊಂಡಜ್ಜಿ ರಸ್ತೆಯ ವಿಜಯನಗರದಲ್ಲಿ ನಡೆದಿದೆ.

ಮಳಿಯಮ್ಮ(80) ಬೀದಿಗೆ ಬಿದ್ದ ನತದೃಷ್ಟ ವೃದ್ಧೆಯಾಗಿದ್ದು, ಇವರನ್ನು ನೇತ್ರಾವತಿ ಬೀದಿಗೆ ತಳ್ಳಿದ ಪಾಪಿ ಮೊಮ್ಮಗಳು. ಮಳಿಯಮ್ಮಗೆ ನಾಲ್ಕು ಜನ ಮಕ್ಕಳಿದ್ದು ಅವರಲ್ಲಿ ಎರಡು ಗಂಡು, ಎರಡು ಹೆಣ್ಣುಮಕ್ಕಳು ಇದ್ದಾರೆ. ನೇತ್ರಾವತಿ ಕೊನೆಯ ಮಗಳ ಮಗಳಾಗಿದ್ದು, ವೃದ್ಧೆಗೆ ಆಸರೆಯಾಗಿದ್ದ ಆಸ್ತಿಯನ್ನು ವಶಪಡಿಸಿಕೊಂಡು ಹೊರ ಹಾಕಿದ್ದಾಳೆ.

ಆಧಾರ್ ಕಾರ್ಡ್ ಮಾಡಿಸುವುದಾಗಿ ಹೇಳಿ ರಿಜಿಸ್ಟರ್ ಅಫೀಸ್ ಗೆ ಕರೆದುಕೊಂಡು ಹೋಗಿ, ಆಸ್ತಿ ಲಪಟಾಯಿಸಿ ಮಳಿಯಮ್ಮಳನ್ನು ಬೀದಿಗೆ ಬಿಟ್ಟಿದ್ದಾರೆ. ಸದ್ಯ ದೇವಸ್ಥಾನವೇ ವೃದ್ಧೆಗೆ ಆಸರೆಯಾಗಿದ್ದು, ಅಜ್ಜಿಗೆ ಅಕ್ಕ ಪಕ್ಕ ಮನೆಯವರೇ ಊಟ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅಜ್ಜಿ ಪರಿಸ್ಥಿತಿಯನ್ನು ಪ್ರಶ್ನಿಸಿದ್ರೆ ರೌಡಿಗಳನ್ನು ಬಿಟ್ಟು ಅಕ್ಕ-ಪಕ್ಕ ಮನೆಯವರ ಮೇಲೂ ಹಲ್ಲೆ ನಡೆಸುತ್ತಿದ್ದಾಳೆ. ಸದ್ಯಕ್ಕೆ ವೃದ್ಧಾಪ್ಯ ವೇತನದ ಆಸರೆಯಿಂದ ಈ ಹಿರಿಜೀವ ಜೀವನ ಸಾಗಿಸುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published.

Back to top button