ಮಂಗಳೂರು: ಭಯೋತ್ಪಾದಕರ ದಾಳಿಯಲ್ಲಿ ಉಗ್ರರ ವಿರುದ್ಧ ಹೋರಾಡಿ ಬಂದ ಸಿಆರ್‍ಪಿಎಫ್ ಯೋಧರೊಬ್ಬರಿಗೆ ತವರೂರಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.
ಫೆಬ್ರವರಿ ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಉಗ್ರರನ್ನು ಹೊಡೆದುರುಳಿಸಿದ್ದ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಆರ್ ಪಿಎಫ್ ಯೋಧ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪದ ಬಜತ್ತೂರು ನಿವಾಸಿ ಜುಬೇರ್ ಎಂ. ಅವರನ್ನು ಹುಟ್ಟೂರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.
Advertisement
ಸಮೂನ್ ಬ್ಯಾರಿ ಹಾಗೂ ಅಮೀನಮ್ಮ ದಂಪತಿಯ ಎರಡನೇ ಪುತ್ರ ಜುಬೇರ್ ಸೇನಾ ಕಾರ್ಯಾಚರಣೆ ಬಳಿಕ ಹುಟ್ಟೂರಿಗೆ ಆಗಮಿಸಿದ್ದರು. ಯೋಧನನ್ನು ಊರಿನವರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ, ಅದ್ಧೂರಿಯಾಗಿ ಸನ್ಮಾನಿಸಿದ್ದಾರೆ.
Advertisement
Advertisement
ಜಮ್ಮುವಿನ ಕಟ್ಟಡ ಒಂದರಲ್ಲಿ ಅವಿತು ಕುಳಿತಿದ್ದ ಲಷ್ಕರ್-ಏ-ತೊಯ್ಬಾ ಉಗ್ರರು ಹಠಾತ್ತಾಗಿ ಸೇನಾ ಯೋಧರ ಮೇಲೆ ದಾಳಿ ನಡೆಸಿದ್ದರು. ಇದರಿಂದಾಗಿ ಹಲವು ಯೋಧರು ಹುತಾತ್ಮರಾಗಿದ್ದರು. ಆದರೆ, ಸಿಆರ್ ಪಿಎಫ್ ಯೋಧರು ಯಶಸ್ವಿ ಕಾರ್ಯಾಚರಣೆ ಮೂಲಕ ಉಗ್ರರನ್ನು ಹೊಡೆದುರುಳಿಸಿದ್ದರು.
Advertisement
ಈ ಮಹತ್ವದ ಕಾರ್ಯಾಚರಣೆ ಬಳಿಕ ಜುಬೇರ್ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ್ದಾರೆ. ಆದ್ದರಿಂದ ತನ್ನ ಪ್ರಾಣವನ್ನು ಲೆಕ್ಕಿಸದೆ ದಾಳಿ ಸಂಘಟಿಸಿದ್ದಕ್ಕಾಗಿ ಜುಬೇರ್ ಅವರನ್ನು ಗ್ರಾಮದವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದು ವಿಶೇಷವಾಗಿತ್ತು.