– 10 ಕಿಮೀ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ
ಹಾವೇರಿ: ಬಿಗ್ ಬಾಸ್ ಕನ್ನಡ 11ರ (Bigg Boss Kannada 11) ವಿನ್ನರ್ ಹನುಮಂತಗೆ (Hanumantha) ತವರೂರಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಜವಾರಿ ಹೈದನಿಗೆ ಹೂವಿನ ಹಾರ ಹಾಕಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
ಹಾವೇರಿ (Haveri) ಜಿಲ್ಲೆ ಸವಣೂರು ಪಟ್ಟಣದಿಂದ ಚಿಲ್ಲೂರುಬಡ್ನಿ ವರೆಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ಸುಮಾರು 10 ಕಿಲೋಮೀಟರ್ ವರೆಗೆ ತೆರದ ವಾಹನ ಮೆರವಣಿಗೆ ಸಾಗಿತು. ಹನುಮಂತನ ಫ್ಯಾನ್ಸ್, ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಕಪ್ ತಗೊಂಡು ಅತ್ತೆ ಮನೆಗೆ ಯಾವಾಗ ಹೋಗ್ತೀರಿ?- ಹನುಮಂತ ಹೇಳಿದ್ದೇನು?
‘ನಮ್ಮ ಹುಡುಗ ಬಿಗ್ ಬಾಸ್ ವಿನ್ನರ್‌ಆದ’ ಎಂದು ಡಿಜೆ ಹಾಡಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಗ್ ಬಾಸ್ ವಿನ್ನರ್ ಕಪ್ ಹಿಡಿದು ಹನುಮಂತ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಹನುಮಂತ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಜನರತ್ತ ಕೈ ಬಿಸಿ, ಕೈ ಮುಗಿದು ಹನುಮಂತ ಧನ್ಯವಾದ ತಿಳಿಸಿದರು. ತನ್ನನ್ನು ಗೌರವಿಸಿ ಅದ್ದೂರಿ ಮೆರವಣಿಗೆ ಮಾಡಿದ ಊರಿನವರಿಗೆ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಸುದೀಪ್ ಸರ್ ರೀತಿ ಬಿಗ್ ಬಾಸ್ ಶೋ ನಡೆಸೋಕೆ ಯಾರಿಂದಲೂ ಆಗಲ್ಲ: ಹನುಮಂತ
ಭಜನೆ ಮತ್ತು ಶಿಶುನಾಳ ಶರೀಫ ತತ್ವಗಳನ್ನ ಹೇಳುತ್ತಾ, ಸರಿಗಮಪ ವೇದಿಕೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದ ಹಳ್ಳಿಹೈದ ಹನುಮಂತ (Hanumantha Lamani) ಬಿಗ್ ಬಾಸ್ ಸೀಸನ್ 11ರಲ್ಲಿ (Bigg Boss 11) ವಿನ್ನರ್ ಆಗಿ ಕರುನಾಡಿನ ಜನರ ಮನಸ್ಸು ಗೆದ್ದಿದ್ದಾರೆ. ಈ ಹಿನ್ನೆಲೆ ಗ್ರಾಮದ ಸ್ನೇಹಿತರು ಹಾಗೂ ಅಭಿಮಾನಿಗಳು ಹನುಮಂತ ಅವರಿಗೆ ಅದ್ದೂರಿ ಸ್ವಾಗತ ಮಾಡುವ ಪ್ಯ್ಲಾನ್ ಮಾಡಿದ್ದರು.
ಬಿಗ್ ಬಾಸ್ 11ರಲ್ಲಿ ಹಾವೇರಿ (Haveri) ಜಿಲ್ಲೆ ಸವಣೂರು (Savanur) ತಾಲೂಕಿನ ಚಿಲ್ಲೂರುಬಡ್ನಿಯ (Chillur Badni) ಹನುಮಂತ ಲಮಾಣಿ ವಿನ್ನರ್ ಆಗಿ ಕರುನಾಡ ಜನರ ಮನಗೆದ್ದಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಇದನ್ನೂ ಓದಿ: ದೋಸ್ತ ನನ್ನ ಪಾಲಿನ ದೇವರು: ಧನರಾಜ್ ಬಗ್ಗೆ ಹನುಮಂತನ ಮನದಾಳ