ಬೀದರ್: ಜಮ್ಮು-ಕಾಶ್ಮೀರದ ಪುಲ್ವಾಮಾ ಬಳಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಸಾವನ್ನೇ ಗೆದ್ದು ಬಂದ ಯೋಧನಿಗೆ ಗಡಿ ಜಿಲ್ಲೆ ಬೀದರ್ ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಮನೋಹರ್ ರಾಥೋಡ್ ಸಾವನ್ನೇ ಗೆದ್ದು ಬಂದ ಯೋಧ. ಮನೋಹರ್ ರಾಥೋಡ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾಲಾಲ್ ತಾಂಡ ನಿವಾಸಿ. ಪುಲ್ವಾಮಾ ಬಳಿ ಉಗ್ರರು ಮಾಡಿದ ದಾಳಿಯಲ್ಲಿ ಮನೋಹರ್ ಹಿಂಬದಿ ಬಸ್ಸಿನಲ್ಲಿ ಬರುತ್ತಿದ್ದರು.
Advertisement
Advertisement
ಉಗ್ರರ ದಾಳಿಯಿಂದ ಮನೋಹರ್ ರಾಥೋಡ್ ಬಚಾವ್ ಆಗಿದ್ದಾರೆ. ಹಾಗಾಗಿ ಮನೋಹರ್ ಅವರನ್ನು ನಗರದ ನೌಬಾದ್ ವೃತ್ತ ದವರೆಗೆ ಯುವಕರು ಬೈಕ್ ರ‍್ಯಾಲಿ ನಡೆಸಿ ಸಾರ್ವಜನಿಕವಾಗಿ ಗೌರವ ನೀಡಿದರು. ಅಲ್ಲದೆ ಬಸವೇಶ್ವರ ವೃತ್ತದಲ್ಲಿ ಬಸವಣ್ಣನ ಪ್ರತಿಮೆಗೆ ಹಾರ ಹಾಕುವ ಮೂಲಕ ಯೋಧ ಮನೋಹರ್ ನಗರಕ್ಕೆ ಎಂಟ್ರಿ ಕೊಟ್ಟರು.
Advertisement
ಫೆ.14 ರಂದು ಉಗ್ರ ಆದಿಲ್ ದಾರ್ ಸ್ಫೋಟಕ ತುಂಬಿದ್ದ ಮಾರುತಿ ಇಕೋ ಕಾರನ್ನು ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಗುದ್ದಿದ್ದಾನೆ. ಪರಿಣಾಮ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಬಳಿಕ ಭಾರತೀಯ ವಾಯುಪಡೆ ಪುಲ್ವಾಮ ದಾಳಿಯ ಪ್ರತಿಕಾರ ತೀರಿಸಿಕೊಳ್ಳಲು ಏರ್ ಸ್ಟ್ರೈಕ್ ನಡೆಸಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv