ಯಾದಗಿರಿ: ಮುಖ್ಯಮಂತ್ರಿಗಳು ಇಂದಿನಿಂದ ಯಾದಗಿರಿ ಜಿಲ್ಲೆಯ ಚಂಡರಕಿಯಲ್ಲಿ ಗ್ರಾಮವಾಸ್ತವ್ಯವನ್ನು ಕೈಗೊಂಡಿದ್ದು, ಹೀಗಾಗಿ ಸಿಎಂ ಅವರು ಇಂದು ಬಸ್ ನಲ್ಲಿ ಗ್ರಾಮದತ್ತ ಪ್ರಯಾಣ ಬೆಳೆಸಿದ್ದರು.
ಮುಖ್ಯಮಂತ್ರಿಗಳು ಬಸ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಜ್ಜಿಯೊಬ್ಬರು ಹಿಂದಿನಿಂದ ಓಡಿಕೊಂಡು ಬಂದಿದ್ದಾರೆ. ಇದನ್ನು ಗಮನಿಸಿದ ಸಿಎಂ ಅವರು ಬಸ್ ನಿಧಾನಗೊಳಿಸುವಂತೆ ಚಾಲಕರಲ್ಲಿ ಹೇಳಿ ಅಜ್ಜಿಯ ಮನವಿಯನ್ನು ಆಲಿಸಿದ್ದಾರೆ.
ಅಜ್ಜಿಯ ಮನವಿಯೇನು?
ಬಸ್ ಬಳಿ ಓಡಿ ಬಂದ ಅಜ್ಜಿ, ನಮಸ್ಕಾರ ಸಿಎಂ ಸಾಹೇಬರೇ.. ನೋಡಿ ನಮಗೆ ಎರಡೂವರೆ ಸಾವಿರ ಪಗಾರ(ಸಂಬಳ) ಹೆಚ್ಚಿಗೆ ಆಗಿಲ್ಲ. ಹೀಗಾಗಿ ಜಾಸ್ತಿ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಸಿಎಂ ಅವರು ಆಯ್ತು ಜಾಸ್ತಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಅಲ್ಲದೆ ಅಜ್ಜಿ 600 ಮಕ್ಕಳಿಗೆ ಅಡುಗೆ ಮಾಡಬೇಕು. ದಯಮಾಡಿ ಜಾಸ್ತಿ ಮಾಡಿಸಿಕೊಡಿ ಎಂದು ಹೇಳಿದ್ದಕ್ಕೆ, ಇಲ್ಲಿ ಅಡುಗೆ ಕೆಲಸ ಮಾಡುತೀರಾ. ಸರಿ ಮಾಡಿಸಿಕೊಡುತ್ತೇನೆ ಎಂದು ಸಿಎಂ ಅವರು ಅಜ್ಜಿಗೆ ಭರವಸೆ ಮಾತುಗಳನ್ನಾಡಿದ ಪ್ರಸಂಗ ನಡೆಯಿತು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]