ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆಯ UI ಚಿತ್ರ ಡಿ.20ರಂದು ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಕೋಟಿಗಟ್ಟಲೇ ಕಲೆಕ್ಷನ್ ಮಾಡುತ್ತಿದೆ. ಇದೀಗ ಯುಐ ಸಿನಿಮಾವನ್ನು ಗ್ರಾಮಿ ಅವಾರ್ಡ್ಸ್ ವಿಜೇತ ರಿಕ್ಕಿ ಕೇಜ್ (Ricky Kej) ವೀಕ್ಷಿಸಿ ಕೊಂಡಾಡಿದ್ದಾರೆ. ಯುಐ ಅದ್ಭುತವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement
ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಯುಐಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಗ್ರಾಮಿ ಅವಾರ್ಡ್ಸ್ ವಿಜೇತ ರಿಕ್ಕಿ ಕೇಜ್ ಯುಐ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರ ಅದ್ಭುತವಾಗಿದೆ. ಬೃಹತ್ ಬ್ಲಾಕ್ ಬಸ್ಟರ್ ಚಿತ್ರ ಇದಾಗಿದೆ. ಯುಐ ಅನನ್ಯವಾಗಿ ಮೂಡಿ ಬಂದಿದೆ. ನಾನು ಸಿನಿಮಾ ನೋಡಿದ್ದೇನೆ,ನೀವು ನೋಡಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಕಿಚ್ಚ
Advertisement
Absolutely amazing!! #UiTheMovie is a massive blockbuster movie set in a post apocalyptic world. Very unique treatment, thoroughly entertaining and thought provoking. A must watch!!! It is in theatres now https://t.co/pask3EglM4
— Ricky Kej (@rickykej) December 23, 2024
Advertisement
ಅಂದಹಾಗೆ, UI ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ಎಂದಿಗೂ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ನಟ ಕೊಟ್ಟಿದ್ದಾರೆ. ಉಪೇಂದ್ರ ನಟನೆ, ನಿರ್ದೇಶನಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
Advertisement
ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ UI ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.