ತುಮಕೂರು: ತಾಲೂಕಿನ ಮಲ್ಲಸಂದ್ರ ಗ್ರಾಮ ಪಂಚಾಯತ್‌ನಲ್ಲಿ ಮಿತಿಮೀರಿದ ಅಕ್ರಮ ನಡೆಯುತಿದ್ದು, ಅದನ್ನು ಪ್ರಶ್ನಿಸಿಲು ಸಾರ್ವಜನಿಕರು ಗ್ರಾ.ಪಂ. ಕಚೇರಿಗೆ ಹೋಗುತಿದ್ದಂತೆ ಪಿಡಿಒ ಎದ್ನೋ ಬಿದ್ನೋ ಎಂದು ಓಡಿ ಹೋದ ಘಟನೆ ನಡೆದಿದೆ.
Advertisement
ಪಿಡಿಒ ಮಂಜಣ್ಣ ಗ್ರಾಮ ಪಂಚಾಯತ್‍ನಲ್ಲಿ ಅಕ್ರಮ ಖಾತೆ ಮಾಡಿಕೊಡುವುದು. ಒಬ್ಬರ ಜಮೀನು ಇನ್ನೊಬ್ಬರಿಗೆ ಖಾತೆ ಮಾಡಿಕೊಡಲಾಗುತ್ತಿದೆ ಅನ್ನೋದು ಸ್ಥಳೀಯರ ಆರೋಪ. ಅಲ್ಲದೇ ಅಬ್ಬತನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ಜಮೀನನ್ನು ಖಾಸಗಿ ಅವರಿಗೆ ಲಂಚದ ಹಣ ಪಡೆದು ಮಾರಾಟ ಮಾಡಿದ ಅರೋಪವಿದೆ. ಜೊತೆಗೆ ಹಾಲನೂರು ಗ್ರಾಮದ ಪಾರ್ವತಮ್ಮ ಎನ್ನುವವರ ಸೈಟನ್ನು ಗೋವಿಂದ ಹಾಗೂ ವೆಂಕಟಪ್ಪ ಎನ್ನುವವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆಪಾದನೆ ಕೂಡ ಮಂಜಣ್ಣರ ಮೇಲಿದೆ. ಇದನ್ನೂ ಓದಿ: ಜಡ್ಜ್ ಭೇಟಿ ವೇಳೆ ಬಾಗಿಲು ಮುಚ್ಚಿದ್ದ ಇನ್ಸ್‌ಪೆಕ್ಟರ್ ಸಸ್ಪೆಂಡ್
Advertisement
ಈ ಎಲ್ಲಾ ಅಕ್ರಮಗಳನ್ನು ಪ್ರಶ್ನಿಸಲು ಗ್ರಾಮಸ್ಥರು ಗ್ರಾಮ ಪಂಚಾಯತ್‍ಗೆ ತೆರಳಿದ್ದಾರೆ. ಮಂಜಣ್ಣ ಅಕ್ರಮ ಎಸಗಿದಕ್ಕೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಕೆಲ ಅಕ್ರಮಗಳ ಸೂಕ್ತ ದಾಖಲೆ ತೋರಿಸಿ ಹಗರಣ ಬಯಲಿಗೆ ತರುತ್ತಿದ್ದಂತೆ ಪಿಡಿಒ ಕಕ್ಕಾಬಿಕ್ಕಿಯಾಗಿದ್ದಾರೆ. ಉತ್ತರ ಕೊಡಲಾಗದೆ ತತ್ತರಿಸಿದ್ದಾರೆ. ಫೋನ್ ಕರೆ ಬಂದ ನೆಪದಲ್ಲಿ ಮಾತನಾಡುತ್ತಾ ಬೈಕ್ ಹತ್ತಿ ತಪ್ಪಿಸಿಕೊಂಡು ಓಡಿಹೋಗಿದ್ದಾರೆ.
Advertisement
Advertisement
ಕಳೆದ 7 ವರ್ಷದಿಂದ ಇದೇ ಗ್ರಾಮ ಪಂಚಾಯತ್‍ನಲ್ಲಿ ಮಂಜಣ್ಣ ಠಿಕಾಣಿ ಹೂಡಿದ್ದು, ರಾಜಕೀಯ ಪ್ರಭಾವದಿಂದ ವರ್ಗಾವಣೆಯೂ ಆಗದೇ ಅಕ್ರಮ ಎಸಗುತ್ತಿದ್ದಾರೆ ಎಂದು ಗ್ರಾಮಸ್ಥರ ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್