ಮಡಿಕೇರಿ: ರೈತರ ಜೀವನಾಡಿ ಕಾವೇರಿ ಮೂಲದಲ್ಲೇ ಕಲುಷಿತಗೊಂಡು ಪಕ್ಕದೂರಿಗೆ ಹರಿಯುತ್ತಿದ್ದಾಳೆ. ಅದರಲ್ಲೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ನಗರದಲ್ಲಿ ನದಿ ಹೆಚ್ಚಾಗಿ ಮಲೀನಗೊಳ್ತಿದೆ.
ಹೀಗಾಗಿ ಗ್ರಾಮ ಪಂಚಾಯ್ತಿ ಸದಸ್ಯ ಸಾಬು ವರ್ಗಿಸ್, ಕಾವೇರಿ ನದಿ ತಟದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ರಕ್ಷಣೆಗೆ ಮುಂದಾಗಿದ್ದಾರೆ. ಸದ್ಯ ಎರಡು ಸಿಸಿಟಿವಿಗಳನ್ನು ಅಳವಡಿಸಿ, ಕಸ ಹಾಕದಂತೆ ಎಚ್ಚರಿಕೆಯ ಬೋರ್ಡ್ ಗಳನ್ನು ಹಾಕಿದ್ದಾರೆ.
Advertisement
Advertisement
ನದಿಗೆ ಕಸ ಎಸೆಯುವವರು, ನದಿ ತಟದಲ್ಲಿ ಪಾರ್ಟಿ ಮಾಡುತ್ತಿದ್ದ ಪುಂಡರು ಕೂಡ ಇದೀಗ ಈ ಸಿಸಿಟಿವಿಗೆ ಹೆದರುತ್ತಿದ್ದಾರೆ. ಅಲ್ಲದೆ ವೈಜ್ಞಾನಿಕ ಕಸ ಘಟಕ ಸ್ಥಾಪಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.