ಕೊಪ್ಪಳ: ಕೆಲಸ ಮಾಡಿದ ಮೇಲೆ ಬಿಲ್ ಪಾಸ್ ಆಗ್ತಿಲ್ಲ ಅನ್ನೋ ಕಾರಣಕ್ಕೆ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡು ಸರ್ಕಾರಕ್ಕೆ ಕುತ್ತು ತಂದಿರುವ ಘಟನೆ ಜನರ ಮನಸ್ಸಲ್ಲಿ ಇನ್ನೂ ಹಾಗೆ ಇದೆ. ಈ ಬೆನ್ನಲ್ಲೆ ಸದ್ಯ 20ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಕೆಲಸ ಮಾಡಿದ ಗುತ್ತಿಗೆದಾರರು ಬಿಲ್ ಪಾವತಿ ಮಾಡದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಹಣ ಕೊಡಿ ಇಲ್ಲ ವಿಷ ಕುಡಿತೀವಿ ಅಂತ ಧರಣಿ ಕೂತಿದ್ದಾರೆ.
Advertisement
20ಕ್ಕೂ ಹೆಚ್ಚು ಗ್ರಾಮ ಪಂಚಾಯತ್ (Grama Panchayat) ಕೆಲಸ ಮಾಡಿದ ಗುತ್ತಿಗೆದಾರರು ಬಿಲ್ ಪಾವತಿ ಮಾಡದ ಹಿನ್ನೆಲೆ ಆತ್ಮಹತ್ಯೆ ಎಚ್ಚರಿಕೆ ನೀಡಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಕಚೇರಿ ಎದುರು ವಿಷದ ಬಾಟ್ಲಿ ಹಿಡಿದು ಪ್ರತಿಭಟಿಸಿದ್ದಾರೆ. ಜಿಲ್ಲಾ ಪಂಚಾಯತ್‍ನ ಸಿಇಓ ಕಳೆದು ಮೂರು ವರ್ಷದ ಹಿಂದೆಯೇ ಕಾಮಗಾರಿ ನಡೆದು ಇದುವರೆಗೂ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಸಿಇಓ ಕಚೇರಿ ಎದುರೆ ಗುತ್ತಿಗೆದಾರರು ವಿಷದ ಬಾಟ್ಲಿ ಹಿಡಿದು ದರಣಿ ನಡೆಸಿದ್ದಾರೆ. ಸಿಇಓ ಅವರು ಬೇಕಂತಲೆ ನಮಗೆ ಕಿರುಕುಳ ನೀಡುತ್ತಿದ್ದಾರೆ. ಮೂರ್ನಾಲ್ಕು ತಿಂಗಳಿನಿಂದ ಕಚೇರಿಗೆ ಓಡುತ್ತಿದ್ದೇವೆ. ಕಾಮಗಾರಿ ನಡೆದ ಬಗ್ಗೆ ಎಲ್ಲಾ ದಾಖಲೆ ನೀಡಿದ್ದೇವೆ. ಅಧಿಕಾರಿಗಳು ಸ್ಥಳ ಮಹಜರು ಸಹ ಮಾಡಿದ್ದಾರೆ. ಆದರೆ ಇದುವರೆಗೂ ಸಿಇಓ ಪೌಜಿಯಾ ತರುನಮ್ ಬಿಲ್ ಪೆಂಡಿಂಗ್ ಇಟ್ಟಿದ್ದಾರೆ ಅಂತ ಗುತ್ತಿಗೆದಾರರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರ ಅನ್ನಭಾಗ್ಯದಿಂದಲೇ ಕೋವಿಡ್ ಸಂದರ್ಭದಲ್ಲಿ ಜನ ಪ್ರಾಣ ಉಳಿಸಿಕೊಂಡಿದ್ದಾರೆ – ಜಮೀರ್
Advertisement
Advertisement
ಗುತ್ತಿಗೆದಾರರು ಕಾಮಗಾರಿ ಮಾಡಿ ಮೂರು ವರ್ಷ ಕಳೆದಿದೆ. ಕೆಲವು ಕಾಮಗಾರಿಗಳ ಮೇಲೆ ದೂರು ಬಂದ ಹಿನ್ನೆಲೆ ಕಾಮಗಾರಿ ಪರಿಶಿಲನೆಗಾಗಿ ಬಿಲ್ ಪಾವತಿ ವಿಳಂಬವಾಗಿದೆ. ಆದರೆ ಸರಿಯಾಗಿ ಕಾಮಗಾರಿ ನಿರ್ವಹಣೆ ಮಾಡಿರುವ 22ಕ್ಕೂ ಹೆಚ್ಚು ಗುತ್ತಿಗೆದಾರರ ಬಿಲ್ ಪಾವತಿಯಾಗಿಲ್ಲ ಅನ್ನೋದು ಗುತ್ತಿಗೆದಾರರು ಮಾಡುತ್ತಿರುವ ಆರೋಪ. ಕೊಪ್ಪಳ ಜಿಲ್ಲೆ ಎಲ್ಲಾ ವಿಭಾಗದ ಬಿಲ್ ಪಾಸ್ ಆಗಿವೆ. ಆದರೆ ಕುಷ್ಟಗಿ ವಿಭಾಗದ ಬಿಲ್ ಗಳು ಮಾತ್ರ ಪೆಂಡಿಗೆ ಇವೆ. ಸುಮಾರು ಮೂರು ಕೋಟಿ ಹಣ ಬಿಡುಗಡೆ ಮಾಡಿಲ್ಲ ಅಂತ ಗುತ್ತಿಗೆದಾರರು ಆರೋಪಿಸಿದ್ದಾರೆ.
Advertisement
ಸದ್ಯ ಗುತ್ತಿಗೆದಾರರ ಈ ನಡೆಯಿಂದ ಇಡಿ ಜಿಲ್ಲಾ ಪಂಚಾಯತ್ ವ್ಯವಸ್ಥೆಯನ್ನೇ ಅನುಮಾನದಲ್ಲಿ ನೋಡುವಂತಾಗಿದೆ. ಮೂರು ವರ್ಷಗಳು ಕಳೆದ್ರು ಬಿಲ್ ಪಾವತಿ ಮಾಡದೇ ಇರುವುದಕ್ಕೆ ಇರೋ ಬಲವಾದ ಕಾರಣ ಏನೂ ಎನ್ನುವಂತಾಗಿದೆ. ಏನೇ ಆಗ್ಲಿ ಸರ್ಕಾರದ ನಿಯಮದ ಪ್ರಕಾರ ಕೆಲಸ ಮಾಡಿದ್ರೆ ಪರಿಶೀಲನೆ ನಡೆಸಿ ಬಿಲ್ ನಿಡೋಕೆ ಅಧಿಕಾರಿಗಳಿಗೆ ಎನ್ ಕಷ್ಟ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k